ಮಧ್ಯಪ್ರದೇಶದ ಸಚಿವರಿಗೆ ೩ ವರ್ಷ ಚುನಾವಣಾ ಸ್ಪರ್ಧೆ ನಿಷೇಧ!?

ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರದೇಶ ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಅವರಿಗೆ ೩ ವರ್ಷಗಳ ಚುನಾವಣಾ ಸ್ಪರ್ಧೆಯಿಂದ ನಿಷೇಧ ಹೇರಿದೆ
ಭೋಪಾಲ: ಪ್ರಾಯೋಜಿತ ಸುದ್ದಿ ಮತ್ತು ಚುನಾವಣಾ ವೆಚ್ಚದ ನಕಲಿ ದಾಖಲೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರದೇಶ ಆರೋಗ್ಯ ಸಚಿವ ನರೋತ್ತಮ್ ಮಿಶ್ರಾ ಅವರಿಗೆ ೩ ವರ್ಷಗಳ ಚುನಾವಣಾ ಸ್ಪರ್ಧೆಯಿಂದ ನಿಷೇಧ ಹೇರಿದೆ.
2008ರಲ್ಲಿ ನಡೆದಿದ್ದ ಚುನಾವಣಾ ವೇಳೆ ನರೋತ್ತಮ ಮಿಶ್ರಾ ಅವರು ಚುನಾವಣಾ ಆಯೋಗಕ್ಕೆ ನೀಡಿದ್ದ ಚುನಾವಣಾ ವೆಚ್ಚದ ವಿವರ ಸರಿಯಿಲ್ಲದ ಕಾರಣ ನರೋತ್ತಮ ಮಿಶ್ರಾ ರನ್ನು ೩ ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜೇಂದ್ರ ಭಾರ್ತಿ ಎಂಬಾತರು ನರೋತ್ತಮ ಮಿಶ್ರಾ ವಿರುದ್ಧ ೨೦೧೨ರಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ದೂರಿನಲ್ಲಿಮಿಶ್ರಾ ಅವರು ಆಯೋಗ ನಿಗದಿ ಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ಹಣವನ್ನು ವ್ಯಯಿಸಿದ್ದು, ಆಯೋಗಕ್ಕೆ ನೀಡಿರುವ ದಾಖಲೆಗಳಲ್ಲಿ ಸುದ್ದಿಗಾಗಿ ನೀಡಿರುವ ಹಣದ ವಿವರಗಳನ್ನೇ ನೀಡಿಲ್ಲ ಎಂದು ಆರೋಪಿಸಿದ್ದರು.
ಈ ಕುರಿತು ತನಿಖೆ ಆಯೋಗ ತನಿಖೆ ನಡೆಸಿತ್ತು ಆದರೂ ಆಯೋಗದ ತನಿಖೆಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಿಶ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಮಿಶ್ರಾ ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಸುಪ್ರಿಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದಿತ್ತು. ಈಗ ಮಿಶ್ರಾ ಅವರ ತಪ್ಪು ಸಾಬೀತಾಗಿದ್ದು, ಚುನಾವಣಾ ಆಯೋಗ ಅವರಿಗೆ ಮೂರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸಿದೆ.
Comments