‘ಟ್ರಂಪ್’ ಹೆಸರಿನ ಭಾರತದ ಈ ಗ್ರಾಮ ಅನಾವರಣ!!

ಹರಿಯಾಣ,: ಭಾರತದ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿರುವ ಬೆನ್ನಲ್ಲೇ ಹರಿಯಾಣಾದ ಮರೋರಾ ಗ್ರಾಮಕ್ಕೆ ಇದೀಗ 'ಟ್ರಂಪ್ ಸುಲಭ್ ಗ್ರಾಮ' ಎಂದು ಹೆಸರಿಡಲಾಗಿದೆ. ಭಾರತ ಹಾಗೂ ಅಮೆರಿಕಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಗ್ರಾಮಕ್ಕೆ ಟ್ರಂಪ್ ಅವರ ಹೆಸರು ಇಡಲಾಗಿದೆ.
ಮರೋರಾ ಗ್ರಾಮ ಪಂಚಾಯಿತಿ ಗ್ರಾಮದ ಹೆಸರನ್ನು ಅಧಿಕೃತವಾಗಿ ಬದಲಿಸಲು ನಿರ್ಣಯವನ್ನು ಅಂಗೀಕರಿಸಿದೆ. ಅಂತೆಯೇ ಶುಕ್ರವಾರದಿಂದಲೇ ಎಲ್ಲಾ ಮನೆಗಳಿಗೂ ಶೌಚಾಲಯ ಒದಗಿಸಲಾಗುತ್ತಿದೆ.
ಪ್ರತಿ ಗ್ರಾಮದ ಮನೆಗೂ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವ ನೀಲನಕ್ಷೆಯನ್ನು ಸುಲಭ್ ಇಂಟರ್ ನ್ಯಾಷನಲ್ ಎನ್ ಜಿಓ ಹೊಂದಿದೆ. ಇನ್ನು ಕೆಲ ದಿನಗಳ ಹಿಂದೆ ಅಮೆರಿಕಾದ ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಠಕ್ ಭಾರತದ ಹಳ್ಳಿಗೆ ಟ್ರಂಪ್ ಹೆಸರಿಡುವ ಘೋಷಣೆ ಮಾಡಿದ್ದರು. ಈ ವೇಳೆ ರಾಜಸ್ಥಾನದ ಮೆವತ್ ಪ್ರಾಂತ್ಯದ ಗ್ರಾಮಕ್ಕೆ ಟ್ರಂಪ್ ಹೆಸರು ಇಡುವುದಾಗಿ ಹೇಳಿದ್ದರು. ಆದರೆ ರಾಜಸ್ಥಾನ ಸರ್ಕಾರ ನಿರಾಕರಿಸಿತ್ತು. ಕಡೆಯದಾಗಿ ಹರಿಯಾಣದ ಮರೋರಾ ಗ್ರಾಮಕ್ಕೆ ಟ್ರಂಪ್ ಹೆಸರಿಡಲಾಗಿದೆ.
Comments