ನೀಟ್ ಫಲಿತಾಂಶ: ರಾಜ್ಯದ ಸಂಕೀರ್ತ್ ಗೆ ೪ನೇ RANK
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರಿನ ಪಬ್ಲಿಕ್ ಸ್ಕೂಲ್ ನ (ದಕ್ಷಿಣ) ವಿದ್ಯಾರ್ಥಿ ಸಂಕೀರ್ತ್ ಸದಾನಂದ ನಾಲ್ಕನೇ RANK ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಮಟ್ಟಿಗೆ ಅವರೇ ಮೊದಲಿಗರಾಗಿದ್ದಾರೆ. 720ಕ್ಕೆ 692 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಪ್ರಕಟವಾದ ಏಮ್ ಪ್ರವೇಶ ಪರೀಕ್ಷೆಯಲ್ಲಿ ೨೭ನೇ ರ್ಯಾಂಕ್ ಗಳಿಸಿದ್ದ ಸಂಕೀರ್ತ್ , ಸಿಇಟಿಯಲ್ಲಿ ಕೃಷಿ ವಿಭಾಗದಲ್ಲಿ ಎರಡನೇ Rank ಪಡೆದಿದ್ದರು. ರಾಜ್ಯದ ರಕ್ಷಿತಾ ರಮೇಶ್ ಅವರಿಗೆನೀಟ್ ನಲ್ಲಿ 41 Rank ದೊರೆತಿದೆ. ಮತ್ತು ಸಂಕೀರ್ತ್ ಹಾಗೂ ರಕ್ಷಿತ್ ಇಬ್ಬರು ಬೇಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ.
ಪಂಜಾಬ್ ನ ನವದೀಪ್ ಟಾಪರ್ ಆಗಿದ್ದು, ಪಂಜಾಬ್ ಮುಕ್ತಸರ್ ಜಿಲ್ಲೆಯ ನವದೀಪ್ ಸಿಂಗ್ ಮೊದಲ Rank ಗಳಿಸಿದ್ದಾರೆ. ಅವರು 697 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ ನಿನ್ನೆ ಫಲಿತಾಂಶ ಪ್ರಕಟಿಸಿತ್ತು.
Comments