ಟ್ರಂಪ್ ಪತ್ನಿಯಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ ಮೊರೆ ಹೋದ ಈಕೆ!!!
ಜಗತ್ತಿನಲ್ಲಿ ಕೆಲವು ಜನರ ಬಯಕೆ ಇತರರಿಗಿಂತ ಭಿನ್ನವಾಗಿರುತ್ತದೆ. ಈ ಮಹಿಳೆ ಇದಕ್ಕೆ ತಾಜಾ ಉದಾಹರಣೆ. ಅಮೆರಿಕಾದ ಕ್ಲಾಡಿಯಾ ಸಾಹಿರಾ ಎಂಬಾಕೆಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮಲೇನಿಯಾರಂತೆ ಕಾಣಿಸಿಕೊಳ್ಳುವ ಇಚ್ಛೆ ಇದೆಯಂತೆ. ಇದಕ್ಕಾಗಿ ಸಾಹಿರಾ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ.
ಮಂಗಳವಾರದಿಂದಲೇ ಕ್ಲಾಡಿಯಾ ಸಾಹಿರಾ ಪ್ಲಾಸ್ಟಿಕ್ ಸರ್ಜರಿಗೆ ಪ್ರಕ್ರಿಯೆ ಆರಂಭವಾಗಿದೆ. ಹೊಟ್ಟೆ, ತುಟಿಯ ಆಕಾರವನ್ನು ವೈದ್ಯರು ಪರಿವರ್ತಿಸಿದ್ದಾರೆ. ಇಂಜೆಕ್ಷನ್ ಸಹ ನೀಡಲಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಸಾಹಿರಾ ಹೇಳಿದ್ದು ಹೀಗೆ, ‘ನನಗೆ ದೇಶದ ಪ್ರಥಮ ಮಹಿಳೆಯಂತೆ ಅನುಭವವಾಗಬೇಕು. ಆಂತರಿಕವಾಗಿ ನಾನು ಅನುಭವ ಪಡೆದಿದ್ದು’, ‘ಬಾಹ್ಯವಾಗಿ ನಾನು ಡೊನಾಲ್ಡ್ ಟ್ರಂಪ್ ಪತ್ನಿ ಮಲೇನಿಯಾರಂತೆ ಕಾಣಬೇಕು’. ಈ ಮೂಲಕ ನಾನು ಆಕೆಯ ಎರಡನೇಯ ಆಗುತ್ತೇನೆ’, ‘ನಾನು ಮಲೇನಿಯಾ ಟ್ರಂಪ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ’.
Comments