‘ಸ್ಮಾರ್ಟ್ ಸಿಟಿ ‘ಮಿಷನ್ ಯೋಜನೆಗೆ ಬೆಂಗಳೂರು ಆಯ್ಕೆ

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಸ್ಮಾರ್ಟ್ ಸಿಟಿ ಮಿಷನ್ 3ನೇ ಹಂತದಲ್ಲಿ 30 ನಗರಗಳು ಆಯ್ಕೆಯಾಗಿವೆ. ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಂದು ಬಿಡುಗಡೆ ಮಾಡಿರುವ 3ನೇ ಸ್ಮಾರ್ಟ್ ಸಿಟಿಯಲ್ಲಿ 30 ನಗರಗಳಿಗೆ ಸ್ಥಾನ ದೊರಕಿದೆ. ಇದರಲ್ಲಿ ಬೆಂಗಳೂರಿಗೆ 7ನೇ ಸ್ಥಾನ ದೊರಕಿದೆ. ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಬೆಂಗಳೂರು ನಗರ ಮತ್ತಷ್ಟು ಅಭಿವೃದ್ಧಿ ಹೊಂದಲು ಇನ್ನು ಮುಂದೆ ಸಾಧ್ಯವಾಗಲಿದೆ.
ಸ್ಮಾರ್ಟ್ ಸಿಟಿ ಟ್ಟಿಯಲ್ಲಿ ಮೊದಲನೇಯ ಸ್ಥಾನ ತಿರುವನಂತಪುರಂ, ಛತ್ತೀಸಗಢ್, ಮುಜಾಫರ್ ನಗರ್, ರಾಜ್ ಕೋಟ್, ಅಮರಾವತಿ, ಪಾಟ್ನಾ. ಕರೀಂ ನಗರ. ಪುದುಚೆರಿ, ಗಾಂಧಿ ನಗರ, ಸಾಗರ, ಕರ್ನಲ್ ಸತ್ಯಾ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಆಯ್ಕೆ ಮಾಡಲಾಗಿದೆ. ಹಾಗೇ ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರ ಕೂಡ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸದೀಯ ಕ್ಷೇತ್ರ ರಾಯಬರೇಲಿಗೆ ಸ್ಮಾರ್ಟ್ ಸಿಟಿಯಲ್ಲಿ ಸ್ಥಾನ ಸಿಕ್ಕಿಲ್ಲ.
Comments