ಇಸ್ರೋದಿಂದ ಕಾರ್ಟೊಸ್ಯಾಟ್ ಉಪಗ್ರಹ ಉಡಾವಣೆ

ಆಂಧ್ರಪ್ರದೇಶ: ಇವತ್ತು ಬೆಳಿಗ್ಗೆ 9.29ಕ್ಕೆ ಸರಿಯಾಗಿ ಶ್ರೀಹರಿಕೋಟಾದಿಂದ ಸತೀಶ್ ಧವನ್ ಬಾಹ್ಯಾಕಾಶ್ ಕೇಂದ್ರದಿಂದ ಪಿಎಸ್ಎಲ್ ವಿ ಮೂಲಕ ಒಟ್ಟು 31 ಗ್ರಹಗಳ ಉಡಾವಣೆ ಮಾಡಲಾಗಿದೆ.ಕಾರ್ಟೋಸ್ಯಾಟ್ 2 ಮತ್ತು ವಿಶ್ವವಿದ್ಯಾಲಯವೊಂದರ ಚಿಕ್ಕ ಉಪಗ್ರಹವಿದ್ದು, ಇನ್ನುಳಿದ 29 ಉಪಗ್ರಹಗಳು 14 ವಿವಿಧ ದೇಶಗಳಿಗೆ ಸೇರಿದ್ದಾಗಿವೆ.
ಪಿಎಸ್ ಎಲ್ ವಿ ರಾಕೆಟ್ ನ ಎಕ್ಸೆಲ್ ಮಾದರಿಯು, 712 ಕೆಜಿ ತೂಕದ ಕಾರ್ಟೋಸಾಟ್ 2 ಸರಣಿ ಉಪಗ್ರಹ ಮತ್ತು 30 ಸಹಪ್ರಯಾಣಿಕ ಸ್ಯಾಟಲೈಟ್ ಗಳನ್ನು ಒಟ್ಟಾಗಿ ಹೊತ್ತೊಯ್ದಿದೆ. 30 ಉಪಗ್ರಹಗಳ ತೂಕ 243 ಕೆಜಿ ಹಾಗೂ ಕಾರ್ಟೋಸ್ಯಾಟ್ ಉಪಗ್ರಹ ಸೇರಿದಂತೆ ೩೧ ಉಪಗ್ರಹಗಳ ಒಟ್ಟು ತೂಕ 955 ಕೆಜಿ ಇದೆ ಎಂದು ಇಸ್ರೋ ಹೇಳಿದೆ.
Comments