ದೇಶದಲ್ಲೇ ಮೊಟ್ಟ ಮೊದಲು, ಬೆಂಗಳೂರಲ್ಲಿ ಪೆಟ್ರೋಲ್,ಡೀಸೆಲ್ ಹೋಮ್ ಡೆಲಿವರಿ !!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿಗೆ ಡೀಸೆಲ್, ಪೆಟ್ರೋಲ್ ಹೋಮ್ ಡೆಲಿವರಿಯಾಗಲಿದೆ. ಬೆಂಗಳೂರಿನಲ್ಲಿ ಡೀಸೆಲ್ ಹೋಮ್ ಡೆಲಿವರಿ ಆರಂಭಗೊಂಡಿದ್ದು, ಗ್ರಾಹಕರು ತಾವಿರುವ ಸ್ಥಳದಿಂದಲೇ ಆನ್ ಲೈನ್ ನಲ್ಲಿ ಪೆಟ್ರೋಲ್, ಡೀಸೆಲ್ ಬುಕ್ ಮಾಡಬಹುದು.
ಇಂಥದ್ದೊಂದು ಚಿಂತನೆ ‘ಮೈ ಪೆಟ್ರೋಲ್ ಪಂಪ್ ಡಾಟ್ ಕಾಮ್’ ಹೆಸರಿನ ವೆಬ್ ಸೈಟ್ ಘೋಷಣೆ ಮಾಡಿದೆ. ಬೆಂಗಳೂರು ಮೂಲದ ಈ ಕಂಪನಿ ಸಿಲಿಕಾನ್ ಸಿಟಿ ಜನತೆಯ ಹಣ ಹಾಗೂ ಸಮಯವನ್ನು ಉಳಿಸಲು ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ಗಾಗಿ ಕಾಯುವ ಅಗತ್ಯವಿರುವುದಿಲ್ಲ. ಒಂದು ಫೋನ್ ಕರೆ ಮಾಡಿದರೆ ಸಾಕು. ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್ ತಂದು ಕೊಡುವ ವ್ಯವಸ್ಥೆ ಮಾಡಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರ ಮನೆ ಬಾಗಿಲಿಗೆ ಪೆಟ್ರೋಲ್, ಡೀಸೆಲ್ ತಂದು ಕೊಡುವ ಘೋಷಣೆ ಮಾಡಿತ್ತು.ಆದ್ರೆ ಈ ಯೋಜನೆ ಇನ್ನು ಜಾರಿಗೆ ಬಂದಿಲ್ಲ. ಈ ಮಧ್ಯೆ ರಾಜಧಾನಿಯಲ್ಲಿ ಇಂತಹ ಸೇವೆ ಆರಂಭವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಕೆಲವೇ ಪ್ರದೇಶಗಳಲ್ಲಿ ಮನೆಗೆ ಪೆಟ್ರೋಲ್ , ಡೀಸೆಲ್ ತಂಡುಕೊಡುವ ಯೋಜನೆ ಜಾರಿಗೊಳಿಸಲಾಗಿದೆ.
ಎಲ್ಲೆಲ್ಲಿ ಹೋಮ್ ಡೆಲಿವರಿ?
ಎಚ್ಎಸ್ ಆರ್ ಲೇಔಟ್, ಸರ್ಜಾಪುರ ರಸ್ತೆ, ಮೈಸೂರು ರಸ್ತೆ, ಯಶವಂತಪುರ, ಹಳೇ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ನಗರದ ಹಲವೆಡೆ ಸೇವೆ ಲಭ್ಯವಿದೆ.
Comments