ರಾಜ್ಯದಲ್ಲಿ 25ರ ಬಳಿಕ ಉತ್ತಮ ಮಳೆ ಸಾಧ್ಯತೆ?
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಳೆಗೆ ಬೇಕಾದ ಗಾಳಿ ದುರ್ಬಲಗೊಂಡಿರುವುದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿ ಗವಾಸ್ಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು , 25ರ ಬಳಿಕ ಮಳೆಯಾಗುವ ಸಾಧ್ಯತೆ ಇದೆ. ಇನ್ನು ೪-೫ ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ.
ಜೂನ್ ೨೪ರ ವರೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದ್ದು, ಅನಂತರ ವಾತಾವರಣದಲ್ಲಿ ಬದಲಾವಣೆ ಆಗುವ ಮುನ್ಸೂಚನೆ ಇದೆ. ತಿಂಗಳ ಅಂತ್ಯಕ್ಕೆ ಮಳೆಯಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ವಾಯುಭಾರ ಕುಸಿತ, ಮೇಲ್ಮ್ಬೈ ಸುಳಿಗಾಳಿ ಕಂಡು ಬಂದಿಲ್ಲ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಮಳೆಯ ಪ್ರಮಾಣ ಕಡಿಮೆ ಆಗಿದೆ ಎಂದು ಕರ್ನಾಟಕ ನೈಸರ್ಗಿತ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಗವಾಸ್ಕರ್ ಹೇಳಿದ್ದಾರೆ.
Comments