ಭಾರತದಲ್ಲಿ ಎಫ್-16 ಯುಧ್ಧವಿಮಾನ ತಯಾರಿಕೆ,. ಒಪ್ಪಂದಕ್ಕೆ ಸಹಿ

20 Jun 2017 12:04 PM | General
356 Report

ಪ್ಯಾರಿಸ್: ಅತ್ಯಾಧುನಿಕ ಶಕ್ತಿಶಾಲಿ ಎಫ್-16 ಫೈಟರ್ ಪ್ಲೇನ್ ಗಳನ್ನು ಭಾರತದಲ್ಲಿ ತಯಾರಿಸಲು ಅಮೆರಿಕಾದ ಲಾಕ್ ಹೀಡ್ಮಾರ್ಟಿನ್ ಸಂಸ್ಥೆ ಹಾಗೂ ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು ಸಹಿ ಹಾಕಿವೆ. ಇದರ ಜೊತೆಗೆ ಭಾರತದ ರಕ್ಷಣಾ ಕ್ಷೇತ್ರಕ್ಕೆ ಪುಷ್ಠಿ ದೊರೆಯಲಿದೆ. ಈ ಒಪ್ಪಂದಗಳನ್ನು ಎರಡು ಸಂಸ್ಥೆಗಳು ಖಚಿತಪಡಿಸಿವೆ.

ಭಾರತದಲ್ಲಿ ವಿಮಾನ ಉತ್ಪಾದನೆ ನಡೆಯಲಿದೆ ಆದರೂ ಅಮೆರಿಕಾದಲ್ಲಿ ಬಹುತೇಕ ಉದ್ಯೋಗಗಳು ಉಳಿದುಕೊಳ್ಳಲಿವೆ. ಎಫ್-16 ಯುಧ್ಧ ವಿಮಾನ ಪೂರೈಕೆದಾರರ ಸಂಖ್ಯೆ ಸಾವಿರಾರು ಇವೆ. ಭಾರತದಲ್ಲಿ ಉತ್ಪಾದನೆಯಾಗುವುದರಿಂದ ಇಲ್ಲಿಯೂ ಉದ್ಯೋಗ ಸೃಷ್ಠಿಯಾಗಲಿದೆ.

ಅಮೆರಿಕಾದ ಎಫ್-16 ವಿಮಾನ ವಿಶ್ವದ ಅತ್ಯುತ್ತಮ ಯುದ್ಧವಿಮಾನಗಳಲ್ಲಿ ಪ್ರಮುಖವಾದದ್ದು, ಭಾರತ ಒಪ್ಪಂದ ಮಾಡಿಕೊಂಡಿರುವ ಎಫ್-16 ಮಾಡೆಲ್ ಇರುವುದರಲ್ಲೇ ಅತ್ಯಾಧುನಿಕವಾಗಿದ್ದು, ಬ್ಲಾಕ್ 70 ಮಾಡೆಲ್ ನ ಎಫ್-16 ಯುದ್ಧ ವಿಮಾನಗಳು ಈಗಾಗಲೇ ಸಾಕಷ್ಟು ಯುದ್ಧಗಳಲ್ಲಿ ಯಶಸ್ವಿಯಾಗಿ ಬಳಕೆಯಾಗಿ ತಮ್ಮ ತಾಕತ್ತು ಸಾಬೀತು ಪಡಿಸಿವೆ. 26 ರಾಷ್ಟ್ರಗಳು ಸದ್ಯ ಯುದ್ಧವಿಮಾನಗಳನ್ನು ಹೊಂದಿವೆ.

Edited By

venki swamy

Reported By

Sudha Ujja

Comments