ಆತ್ಮೀಯ ಸ್ನೇಹಿತನ ಜತೆ ಮದುವೆಯಾದ 5 ವರ್ಷದ ಬಾಲಕಿ!!

ಸ್ಕಾಟ್ ಲ್ಯಾಂಡ್: ಭಾರತ ಸೇರಿದಂತೆ ಬೇರೆ ದೇಶಗಳಲ್ಲಿ ಬಾಲ್ಯ ವಿವಾಹ ನಿಷೇಧವಿದೆ. ಆದರೆ ಸ್ಕಾಟ್ ಲ್ಯಾಂಡ್ ನಲ್ಲಿ ನಡೆದ ಬಾಲ್ಯವಿವಾಹಕ್ಕೆ ಕಾನೂನು ಸಹ ಅಡ್ಡಿಪಡಿಸಿಲ್ಲ. ಎಲ್ಲರೂ ಪ್ರೀತಿಯಿಂದ ಈ ಪುಟ್ಟ ಬಾಲಕಿಯ ಮದುವೆ ನೆರವೇರಿಸಿದ್ದಾರೆ. ಮದುವೆ ಆಗಬೇಕು ಎಂದು ಕ್ಯಾನ್ಸರ್ ಪೀಡಿತೆ ಪೇಟರ್ ಸನ್ ಎಂಬ ಪುಟ್ಟ ಬಾಲಕಿಯ ಕೊನೆ ಆಸೆಯಾಗಿತ್ತು. ಆದ ಕಾರಣ ಈ ಮದುವೆಯನ್ನು ಬಾಲಕಿಯ ಕುಟುಂಬದವರು ಅದ್ಧೂರಿಯಾಗಿ ಮಾಡಿದ್ದಾರೆ.
ಆರು ವರ್ಷದ ತನ್ನ ಆತ್ಮೀಯ ಗೆಳೆಯ ಹ್ಯಾರಿಸ್ ಜತೆ ಈಲೆದ್ ಪೇಟರ್ ಸನ್ ಎಂಬ ಬಾಲಕಿ ಮದುವೆಯಾಗಿದ್ದು, ಇಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ. ಇಬ್ಬರ ಜೋಡಿಯನ್ನು ಹರಿಸಲು ಹ್ಯಾರಿಸ್ ಹಾಗೂ ಪೇಟರ್ ಸನ್ ಕುಟುಂಬದವರು, ಸ್ನೇಹಿತರು ಇದೇ ವೇಳೆ ಭಾಗಿಯಾಗಿದ್ದರು.
ಸೂಪರ್ ಹಿರೋಗಳಂತೆ ಡ್ರೆಸ್ ಮಾಡಿಕೊಂಡಿದ್ದ ನವ ಜೋಡಿಗಳು ಮಿಂಚುತ್ತಿದ್ದರು. ಹ್ಯಾರಿಸ್ ಗೆ ಇದು ಮೊದಲನೇಯ ಮದುವೆ. ಇದು ಆತನಿಗೆ ಹೊಸ ಅನುಭವವಾಗಿದೆ. ಪ್ರತಿ ನಿಮಿಷವನ್ನು ಆತ ಆನಂದಿಸುತ್ತಿದ್ದಾನೆ ಎಂದು ಹ್ಯಾರಿಸ್ ತಂದೆ ಬಿಲ್ಲಿ ಹೇಳಿದ್ದಾರೆ.
Comments