ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ
ಮೈಸೂರು: 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗೆ ಮುಂದಾಗಿರುವ ಮೈಸೂರಿನ ಯೋಗ ಪಟುಗಳು ಅರಮನೆ ಆವರಣದಲ್ಲಿ ಪೂರ್ವ ತಯಾರಿ ನಡೆಸಿದರು.
ಅರಮನೆಯ ಆವರಣದಲ್ಲಿ ೬೦೦೧ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಚೈನ್ ಲಿಂಕ್ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಗಿದೆ. ೨೦೧೪ರಲ್ಲಿ ತಮಿಳುನಾಡಿನ ಪೆರಂಬೂರಿನ ವಿದ್ಯಾಶಾಲಾದ ೩೮೦೦ ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.
Comments