ಅನಾಥ ಮಕ್ಕಳಿಗೆ ಪ್ರಧಾನಿ ಮೋದಿ ನೆರವು
ಜೈಪುರ: ಹಳೇ ನೋಟು ಹೊಂದಿದ್ದ ಅನಾಥರಿಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಿದ್ದಾರೆ. ರಾಜಸ್ಥಾನ ಕೋಟಾದ 17 ವರ್ಷದ ಬಂಜಾರಾ ಮತ್ತು ಆತನ ಸಹೋದರಿ ಸಲೋನಿಗೆ 96 ಸಾವಿರ ರೂಪಾಯಿ ಮೊತ್ತದ ಹಳೆಯ ನೋಟು ಸಿಕ್ಕಿತ್ತು. ಆದ್ರೆ ಅಷ್ಟೋತ್ತಿಗೆ ನೋಟು ವಿನಿಮಯಕ್ಕೆ ನೀಡಲಾಗಿದ್ದ ಅವಧಿ ಕೂಡಾ ಮುಗಿದು ಹೋಗಿತ್ತು. ಇದರಿಂದ ಏನ್ ಮಾಡುವುದು ಗೊತ್ತಾಗದೇ ಇಬ್ಬರು ಪ್ರಧಾನಿಯವರಿಗೆ ಪತ್ರ ಬರೆದಿದ್ದರು.
ಈ ಪತ್ರಕ್ಕೆ ಸ್ಪಂದಿಸಿರುವ ಪ್ರಧಾನಿ ಮೋದಿ, ಈ ಮಕ್ಕಳಿಗೆ ೫೦ ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ವಿಮೆ ಪಾಲಿಸಿಯನ್ನು ಮಾಡಿಸಿದ್ದಾರೆ. ಈ ಎರಡೂ ಪಾಲಿಸಿಗಳಿಗಾಗಿ ಐದು ವರ್ಷದ ಮಟ್ಟಿಗೆ 1.170 ರೂಪಾಯಿ ಇನ್ಶೂರೆನ್ಸ್ ಪ್ರೀಮಿಯಮ್ ಹಣವನ್ನು ಬಿಡುಗಡೆ ಮಾಡಿಸಿದ್ದಾರೆ.
ಬಿಡುಗಡೆ ಮಾಡಲಾಗಿರುವ ಹಣ ಹಾಗೂ ವಿಮೆ ಪ್ರೀಮಿಯಮ್ ಹಣ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಕಾಗದಿದ್ದರೂ ಈ ನೆರವಿನಿಂದ ನಿಮ್ಮ ಕಷ್ಟಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ನಂಬಿದ್ದೇನೆ. ಪತ್ರದ ಮೂಲಕ ನಿಮ್ಮ ಈಗಿನ ಪರಿಸ್ಥಿತಿ ಬಗ್ಗೆ ತಿಳಿದು ನನಗೆ ದುಃಖವಾಗಿದೆ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಹೇಳಿದ್ದಾರೆ.
Comments