ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಹೇರಲಿದ್ದಾರ ಸಿಎಂ ಸಿದ್ದರಾಮಯ್ಯ ?
ಶೂಟಿಂಗ್ ಗಾಗಿ ಭರದ ಸಿದ್ಧತೆಗಳು ಸಾಗಿದ್ದು, ಸಿದ್ದರಾಮಯ್ಯ ಅವರ ಜೀವನದ ಅವಲೋಕನವನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತೆ ಮಾಡಿದೆ.
ಜನಪ್ರಿಯ ಟಿವಿ ಸರಣಿಯಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಲಿದ್ದಾರೆಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ.ಜೂನ್ 22ರಂದು ಈ ಎಪಿಸೋಡ್ ಗಳ ಶೂಟಿಂಗ್ ನಡೆಯಲಿದ್ದು, ಜೂನ್ 24ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಝೀ ಕನ್ನಡದ ಮೂಲಗಳು ತಿಳಿಸಿವೆ.
Comments