ಬೆಂಗಳೂರಲ್ಲಿ ವೈದ್ಯರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ೨೦೧೭ನ್ನು ವಿರೋಧಿಸಿ ಕರೆಯಲಾದ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವತಂತ್ರ ಉದ್ಯಾನದವರೆಗೆ ಪ್ರೊಟೆಸ್ಟ್ ಮೆರವಣಿಗೆ ಮೂಲಕ ತೆರಳಿ ಉದ್ಯಾನದಲ್ಲಿ ಸಮಾವೇಶ ನಡೆಸಿದ್ದಾರೆ. ಈ ವೇಳೆ ಸಾವಿರಾರು ಖಾಸಗಿ ವೈದ್ಯರು ಭಾಗಿಯಾಗಿದ್ದರು.
ರಾಜ್ಯದಲ್ಲಿ ಶೇ 70 ರಷ್ಟು ಆಸ್ಪತ್ರೆಗಳು ಸಣ್ಣ ಗಾತ್ರದ ಆಸ್ಪತ್ರೆಗಳಿವೆ. ಸದ್ಯದ ಕಾಯ್ದೆ ಜಾರಿಗೆ ಬಂದರೆ ಅವರಿಗೆ ಇದರಿಂದ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಇವು ನಷ್ಟದಲ್ಲಿದ್ದು, ಇನ್ನಷ್ಟು ನಿರ್ಬಂಧಗಳು ಅನ್ವಯವಾದರೆ ಮುಚ್ಚಬೇಕಾಗುತ್ತದೆ ಎಂದು ಖಾಸಗಿ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ನಡೆದರೂ ಕೆಲ ಆಸ್ಪತ್ರೆಗಳಲ್ಲಿ ಕೇವಲ ತುರ್ತು ಸೇವೆ ಮಾತ್ರ ಚಾಲ್ತಿಯಲ್ಲಿತ್ತು. ಜನರ ತುರ್ತು ಸೇವೆಗೆ ಮಾತ್ರ ಮೀಸಲಾಗಿತ್ತು. ಜಸ್ಟೀಸ್ ವಿಕ್ರಮ್ ಜಿತ್ ಸೇನ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ಸಲ್ಲಿಸಿದ್ದ ವರದಿ ಆಧರಿಸಿ ಪ್ರತ್ಯೇಕ ನಿಯಂತ್ರಣ ಸಮಿತಿ ರಚಿಸುವ ಅಗತ್ಯವಿಲ್ಲ, ಆದ್ರೆ ಸರ್ಕಾರಿ ಆಸ್ಪತ್ರೆಗಳನ್ನು ಇದೇ ಕಾಯ್ದೆ ವ್ಯಾಪ್ತಿಯಡಿ ತರಬೇಕೆಂದು ಸೂಚಿಸಲಾಗಿತ್ತು. ಆದರೆ ಈಗ ಸರ್ಕಾರ ಸಿದ್ಧಪಡಿಸಿರುವ ವರದಿ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
Comments