ನಾಳೆಯಿಂದ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ಬೆಲೆ ಬದಲಾವಣೆಯನು , ತಿಳಯುವುದು ಹೇಗೆ ಗೊತ್ತಾ..?
ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿನಿತ್ಯ ಬದಲಾವಣೆಯಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬದಲಾವಣೆ ಆಧರಿಸಿ ನಿತ್ಯ ಬೆಲೆ ಪರಿಷ್ಕರಣೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು, ನಾಳೆಯಿಂದ ಜಾರಿಗೆ ಬರಲಿದೆ.
ದೇಶಾದ್ಯಂತ ಗ್ರಾಹಕರ ಅನುಕೂಲಕ್ಕಾಗಿ ಬಂಕ್`ಗಳಲ್ಲಿ ಎಲ್ಇಡಿ ಸ್ಕ್ರೀನ್ ಮೂಲಕ ಬೆಲೆ ಪರಿಷ್ಕರಣೆ ಮಾಹಿತಿಯನ್ನ ಗ್ರಾಹಕರಿಗೆ ನೀಡಲು ನಿರ್ಧರಿಸಿದೆ. ಇದರ ಜೊತೆಗೆ ಟೋಲ್ ಫ್ರೀ ನಂಬರ್, ಸೋಶಿಯಲ್ ಮೀಡಿಯಾ ಪೋಸ್ಟ್, ಎಸ್ಎಂಎಸ್ ಮತ್ತು ಆಪ್ ಅಲರ್ಟ್ ಮೂಲಕವೂ ಬೆಲೆ ಪರಿಷ್ಕರಣೆ ಬಗ್ಗೆ ಮಾಹಿತಿ ಸಿಗಲಿದೆ.
ಮನೆಯಲ್ಲೇ ಕುಳಿತು ಸಹ ಬೆಲೆ ಪರಿಷ್ಕರಣೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. "Fuel@IOC" ವೆಬ್ ಸೈಟ್ ಮೂಲಕ ಮತ್ತು ಆರ್`ಎಸ್`ಪಿ ಎಮದು ಟೈಪ್ ಮಾಡಿ ಸ್ಪೇಸ್ ಕೊಟ್ಟು ಡೀಲರ್ ಕೋಡ್ ಹಾಕಿ 9224992249.ಎಸ್ಎಂಎಸ್ ಕಳುಹಿಸುವ ಮೂಲಕವೂ ಪೆಟ್ರೋಲ್, ಡೀಸೆಲ್ ಮಾಹಿತಿ ಪಡೆಯಬಹುದಾಗಿದೆ.
Comments