‘ಯುದ್ಧ ಬೇಕು ಎನ್ನುವರನ್ನು ಗಡಿಗೆ ಕರೆ ತನ್ನಿ’- ಸಲ್ಮಾನ್ ಖಾನ್

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರ ಗಡಿಯಲ್ಲಿ ಉಗ್ರರಿಂದ ದಾಳಿ ಹೆಚ್ಚುತ್ತಿರುವ ಹಿನ್ನಲೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರತಿಯೊಂದು ಸಮಸ್ಯೆಗೂ ಯುದ್ಧವೇ ಕಾರಣವಲ್ಲ, ಮನೆಯಲ್ಲಿ ಕುಳಿತು ಯುದ್ಧ ಬೇಕು ಎನ್ನುವರನ್ನು ಗಡಿಗೆ ಕರೆತನ್ನಿ, ಕೈಯಲ್ಲಿ ಗನ್ ಕೊಟ್ಟು ಸೈನಿಕರ ಜತೆಗೂಡಿ ಯುದ್ಧಕ್ಕೆ ನಿಲ್ಲಲು ಹೇಳಿ. ಆಗ ಮಾತ್ರ ಅವರಿಗೆ ನಿಜ ಏನು ಎಂದು ಗೊತ್ತಾಗುತ್ತದೆ ಎಂದು ಸಲ್ಮಾನ್ ಹೇಳಿದ್ದಾರೆ.
ಸದ್ಯ ಸಲ್ಮಾನ್ ಟ್ಯೂಬ್ ಲೈಟ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯೂಸಿ ಇದ್ದಾರೆ. ಟ್ಯೂಬ್ ಲೈಟ್ ಚಿತ್ರ ೧೯೬೨ರಲ್ಲಿ ನಡೆದ ಚೀನಾ –ಭಾರತ ಯುದ್ಧದ ಕುರಿತು ಕಥೆ ಹೊಂದಿದೆ. ಆದ್ರೆ ನಿರ್ದೇಶಕ ಕಬೀರ್ ಖಾನ್ ಯುದ್ಧದ ಬಗ್ಗೆ ಹೇಳಿಲ್ಲ, ಬದಲಾಗಿ ಎರಡು ದೇಶಗಳಲ್ಲಾಗುವ ಪರಿಣಾಮಗಳ ಬಗ್ಗೆ ತಮ್ಮ ಸಿನಿಮಾದಲ್ಲಿ ತೋರಿಸಿದ್ದಾರೆ.
Comments