ಕಲ್ಯಾಣ ಮಂಟಪದಲ್ಲಿ ಮದುವೆಯಾಗಲು ನಿರಾಕರಿಸಿದ ವಧು!

ಉತ್ತರಪ್ರದೇಶ: ವರನನ್ನು ಮದುವೆಯಾಗಲು ಕಲ್ಯಾಣ ಮಂಟಪದಲ್ಲಿ ಯುವತಿ ನಿರಾಕರಿಸಿದ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ. ಮೂಲಗಳ ಪ್ರಕಾರ ದಾಮೋದರ್ ಪುರ ಗ್ರಾಮದ ದಲಿತ ನಿವಾಸಿ ಧನಪತಿ ರಾಮ್ ಪುತ್ರ ರಾಜನ್ ಎಂಬಾತನ ಜತೆಗೆ ಮದುವೆ ಫಿಕ್ಸ್ ಆಗಿತ್ತು, ೧೦ ರಂದು ಮದುವೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ವರನನ್ನು ಕರೆದುಕೊಂಡು ಕಲ್ಯಾಣ ಮಂಟಪಕ್ಕೆ ಕರೆತರಲಾಗಿತ್ತು. ಈ ವೇಳೆ ಮದ್ಯ ಸೇವನೆ ಮಾಡಿ ಬಂದಿದ್ದ ವರನನ್ನು ವಧು ಮದುವೆಯಾಗಲು ನಿರಾಕರಿಸಿದ್ದಾಳೆ.
ವಧುವಿನ ಈ ನಿರ್ಧಾರದಿಂದ ಬಂಧುಗಳು ಹಾಗೂ ಕುಟುಂಬದವರು ಮದುವೆಯಾಗುವಂತೆ ಒತ್ತಾಯಿಸಿದ್ರು. ಆದರೆ ವಧು ಯಾರ ಮಾತನ್ನು ಕೇಳದೇ ಮದುವೆ ನಿರಾಕರಿಸಿಯೇ ಬಿಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಿಹಾರದಲ್ಲೂ ಕೂಡ ಇಂಥದ್ದೇ ಘಟನೆ ನಡೆದಿರುವುದರ ಬಗ್ಗೆ ವರದಿಯಾಗಿದೆ. ವರನಿಗೆ ಮದ್ಯಪಾನದ ದುಶ್ಚಟವಿತ್ತು. ತನ್ನನ್ನು ಮದುವೆಯಾಗುವ ಯುವಕ ಮದ್ಯ ಸೇವಿಸುವ ದುಶ್ಚಟ ಹೊಂದಿದ್ದಾನೆ ಎಂದು ಅರಿತ ವಧು ಮದುವೆಯಾಗಲು ನಿರಾಕರಿಸಿದಳು. ಕುಡಿದು ಬರುವ ಗಂಡನ ಜತೆಗೆ ಮದುವೆಯಾಗುವುದು ಯುವತಿಗೆ ಇಷ್ಟವಿರಲಿಲ್ಲ. ಆದ ಕಾರಣ ಮದುವೆ ಇಲ್ಲಿ ಕೂಡ ಅರ್ಧದಲ್ಲೇ ಮುರಿದು ಬಿದ್ದಿದೆ.
Comments