ರಾಜಸ್ಥಾನದ ಗ್ರಾಮಕ್ಕೆ ಡೊನಾಲ್ಡ್ ಟ್ರಂಪ್ ಹೆಸರು!!

ನವದೆಹಲಿ: ರಾಜಸ್ಥಾನದ ಪುಟ್ಟ ಗ್ರಾಮಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಶೀರ್ಘದಲ್ಲೇ ಈ ರಾಜಸ್ಥಾನದ ಒಂದು ಹಳ್ಳಿಗೆ ಡೊನಾಲ್ಡ್ ಹೆಸರಿಡಲಾಗುತ್ತದೆ ಎಂದು ಸುಲಭ್ ಶೌಚಾಲಯ ಆಂದೋಲನದ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ತಿಳಿಸಿದ್ದಾರೆ.
ಅಮೆರಿಕಾದ ವಾಷಿಂಗ್ ಟನ್ ನಲ್ಲಿ ಆಯೋಜಿಸಲಾಗಿದ್ದ ಕಮ್ಯೂನಿಟಿ ಕಾರ್ಯಕ್ರಮವೊಂದರಲ್ಲಿ ಭಾರತದಿಂದ ಪಾಠಕ್ ಪ್ರತಿನಿಧಿಸಿದ್ದರು. ಅಮೆರಿಕಾ ಹಾಗೂ ಭಾರತದ ಮಧ್ಯೆ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸುಧಾರಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ರಾಜಸ್ಥಾನದ ಈ ಹಳ್ಳಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ವರ್ಜೀನಿಯಾ ರಾಜ್ಯಪಾಲ ಕೂಡ ಈ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
Comments