ಪ್ರೇಯಸಿ ಎದುರು ಕಣ್ಣೀರಿಟ್ಟಿದ್ದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪರಸ್ಪರ ಪ್ರೀತಿಸ್ತಾ ಇರೋ ವಿಚಾರ ಗೊತ್ತೇ ಇದೆ. ಪಾರ್ಟಿ, ಫಂಕ್ಷನ್ ಗಳಿಗೆಲ್ಲಾ ಈ ಜೋಡಿ ಕೈಕೈ ಹಿಡಿದು ಬರ್ತಾರೆ. ಕೊಹ್ಲಿ ಹೋದಲ್ಲೆಲ್ಲಾ ಅನುಷ್ಕಾ ಕೂಡ ಪ್ರತ್ಯಕ್ಷವಾಗ್ತಾಳೆ. ಇಷ್ಟೆಲ್ಲಾ ಇದ್ರೂ ಅನುಷ್ಕಾ ಈ ಬಗ್ಗೆ ಇದುವರೆಗೂ ತುಟಿ ಬಿಚ್ಚಿಲ್ಲ.
ಆದ್ರೆ ಕೊಹ್ಲಿ ತಮ್ಮ ಲೇಡಿ ಲವ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮಿಬ್ಬರ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಮೊಹಾಲಿಯಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದ ಸಮಯ, ಅನುಷ್ಕಾ ಕೂಡ ಅಲ್ಲಿ ಕೊಹ್ಲಿ ಜೊತೆಗಿದ್ಲು. ಆಗ್ಲೇ ವಿರಾಟ್ ಗೆ ಟೆಸ್ಟ್ ತಂಡದ ನಾಯಕತ್ವ ದೊರೆತಿತ್ತು.
ವಿಶೇಷ ಅಂದ್ರೆ ಏಕದಿನ ತಂಡದ ನಾಯಕತ್ವ ಸಿಕ್ಕಿದಾಗ್ಲೂ ಕೊಹ್ಲಿ ಪ್ರೇಯಸಿಯ ಜೊತೆಗೇ ಇದ್ರು. ಮೊಹಾಲಿಯಲ್ಲಿ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯನ್ನು ಏಕದಿನ ತಂಡಕ್ಕೂ ಕ್ಯಾಪ್ಟನ್ ಮಾಡಿರೋದಾಗಿ ಬಿಸಿಸಿಐ ಘೋಷಿಸಿತ್ತು. ಈ ಸಿಹಿ ಸುದ್ದಿಯನ್ನು ವಿರಾಟ್ ಮೊದಲು ಹಂಚಿಕೊಂಡಿದ್ದು ತಮ್ಮ ಗೆಳತಿ ಅನುಷ್ಕಾ ಜೊತೆಗೆ.
ಈ ಖುಷಿ ಸುದ್ದಿಯನ್ನು ಅನುಷ್ಕಾಗೆ ಹೇಳುವಾಗ ಕೊಹ್ಲಿ ಕಣ್ಣೀರಿಟ್ಟಿದ್ದಾರೆ. ತಾವು ಉನ್ನತ ಸ್ಥಾನಕ್ಕೇರ್ತಾ ಇರೋ ಖುಷಿಯಲ್ಲಿ ಕೊಹ್ಲಿ, ಪ್ರೇಯಸಿಯೆದುರು ಆನಂದಭಾಷ್ಪ ಸುರಿಸಿದ್ದಾರೆ. ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಅಂತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Comments