ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ
ಮೈಸೂರು: ಶೀಘ್ರವೇ ರೈತರ ಸಾಲಮನ್ನಾ ಮಾಡಬೇಕು ಇಲ್ಲದ್ದಿದ್ದರೇ ಜುಲೈ7ರಿಂದ 9 ರವರೆಗೆ ರಾಜ್ಯಾದ್ಯಂತ ರೈತರ ಬೃಹತ್ ರ್ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಸಾಲಮನ್ನಾ ಮಾಡಿದರೇ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕವಾಗಿ ಧನ್ಯವಾದ ಹೇಳುತ್ತೇನೆ ಎಂದರು,ಇಲ್ಲವಾದಲ್ಲಿ ಜುಲೈ 10 ರಂದು ಸುಮಾರು 4 ಲಕ್ಷ ರೈತರು ಬೆಂಗಳೂರಿನಲ್ಲಿ ಸೇರಿ ಭಾರೀ ಪ್ರಮಾಣದ ರ್ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ. ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ 1.95 ಲಕ್ಷ ಕೋಟಿ ಅನುದಾನ ನೀಡಿದೆ ಎಂದು ಬಿಎಸ್ ವೈ ಇದೇ ವೇಳೆ ತಿಳಿಸಿದ್ದಾರೆ.
Comments