ಸತ್ಯದ ಪರವಾಗಿ ನಿಲ್ಲುವರನ್ನು ಬಿಜೆಪಿ ತುಳಿಯುತ್ತದೆ

ನವದೆಹಲಿ: ಸತ್ಯದ ಪರವಾಗಿ ನಿಲ್ಲುವರನ್ನು ಕೇಂದ್ರ ಸರ್ಕಾರ ಅಧಿಕಾರಯುತವಾಗಿ ತುಳಿಯುತ್ತದೆ. ಆದರೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಎದೆಗಾರಿಕೆ ಇದ್ದು, ಅದರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಮುಖವಾಣಿ ಐತಿಹಾಸಿಕ ಪತ್ರಿಕೆ ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಇವತ್ತು ಮರು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರ ಬಲವಂತವಾಗಿ ಜನರ ಬಾಯಿ ಮುಚ್ಚಿಸುತ್ತದೆ ಎಂದು ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ರಾಜಕೀಯ ಕಾರಣಗಳಿಂದ ನಿಂತು ಹೋಗಿತ್ತು ಈಗ ಮತ್ತೆ ಆರಂಭವಾಗಿದೆ ಎಂದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಇದೇ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಸಹ ಉಪಸ್ಥಿತರಿದ್ದರು.
Comments