ಮತ್ತೊಂದು ಹೊಸ ಆಫರ್ ಹೊತ್ತು ತಂದ ಜಿಯೋ

ರಿಲಾಯನ್ಸ್ ಜಿಯೋ ಗ್ರಾಹಕರಿಗಾಗಿ ಹೊಸ ಯೋಜನೆಯೊಂದನ್ನು ಶುರುಮಾಡಿದೆ. ಜಿಯೋ ಈ ಹೊಸ ಆಫರ್ ಮತ್ತೊಮ್ಮೆ ಉಳಿದ ಟೆಲಿಕಾಂ ಕಂಪನಿಗಳ ತಲೆನೋವಿಗೆ ಕಾರಣವಾಗಿದೆ. ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೆಚ್ಚುವರಿ ಶೇಕಡಾ 20ರಷ್ಟು ಡೇಟಾ ನೀಡುವುದಾಗಿ ಘೋಷಣೆ ಮಾಡಿದೆ.
LYF ಸ್ಮಾರ್ಟ್ಫೋನ್ ಇರುವ ಗ್ರಾಹಕರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. LYF ಸ್ಮಾರ್ಟ್ ಫೋನ್ ಹೊಂದಿರುವ ಎಲ್ಲರಿಗೂ ಈ ಆಫರ್ ಲಭ್ಯವಿಲ್ಲ. 6,600ರಿಂದ 9,700 ರೂಪಾಯಿ ಒಳಗಿನ LYF ಸ್ಮಾರ್ಟ್ಫೋನ್ ಹೊಂದಿದವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಜೊತೆಗೆ ಸ್ಮಾರ್ಟ್ಫೋನ್ ವಾಟರ್ ಮಾಡಲ್ ಆಗಿರಬೇಕೆಂದು ಕಂಪನಿ ಹೇಳಿದೆ.
ನಿಮ್ಮ ಬಳಿಯೂ LYF ಸ್ಮಾರ್ಟ್ಫೋನ್ ಇದ್ದು ಜಿಯೋ 1 ಜಿಬಿ ಡೇಟಾ ಪಡೆಯುತ್ತಿದ್ದರೆ ಇನ್ಮುಂದೆ 1 ಜಿಬಿ ಬದಲು 1.2 ಜಿಬಿ ಡೇಟಾ ನಿಮಗೆ ಸಿಗಲಿದೆ.
Comments