ಗಂಗೆ ಮಲಿನಗೊಳಿಸಿದರೆ ರೂ.100 ಕೋಟಿ ದಂಡ!
ನವದೆಹಲಿ: ಗಂಗೆಯನ್ನು ಇತ್ತೀಚೆಗಷ್ಟೇ ಜೀವಂತ ವಸ್ತು ಎಂದು ಉತ್ತರಾಖಂಡ ಹೈಕೋರ್ಟ್ ಘೋಷಿಸಿತ್ತು. ಇದರ ಬೆನ್ನಲ್ಲೇ ಗಂಗೆಯನ್ನು ಮಲಿನರಹಿತವಾಗಿ ಇರಿಸುವ ಉದ್ದೇಶದಿಂದ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಚಿಂತನೆ ನಡೆಸಿರುವ ಪ್ರಕಾರ ಇನ್ನು ಮುಂದೆ ಗಂಗೆಯನ್ನು ಮಲಿನ ಮಾಡುವವರಿಗೆ ರೂ.100 ಕೋಟಿ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಲು ನಿರ್ಧಾರ ಕೈಗೊಳ್ಳಳಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ಪ್ರಸ್ತಾವವನ್ನು ಕೇಂದ್ರ ಸರ್ಕಾರದಿಂದ ನೇಮಕಕೊಂಡ ಸಮಿತಿ ಸಿದ್ಧಪಡಿಸಿದೆ. 'ರಾಷ್ಟ್ರೀಯ ಗಂಗಾ ನದಿ ಮಸೂದೆ (ಸಂರಕ್ಷಣೆ, ನಿರ್ವಹಣೆ, ಪುನರುತ್ಥಾನ)-2017' ಮಂಡಿಸಲ್ಪಟ್ಟರೆ, ನದಿ ಒದರ ಮೇಲೆ ತರಲಾಗುತ್ತಿರುವ ದೇಶದ ಮೊದಲ ವಿಧೇಯಕ ಇದಾಗಲಿದೆ.
ಈ ಕರಡು ಮಸೂದೆ ಅನ್ವಯ, ಗಂಗೆಯನ್ನು ಮಲಿಗೊಳಿಸಿದರೆ, ಅದರ ಹರಿವು ತಡೆಗಟ್ಟಿದರೆ, ತಟದಲ್ಲಿ ಮರಳು ಗಣಿಗಾರಿಕೆ ನಡೆಸಿದರೆ, ನದಿ ಜಾಗವನ್ನು ಒತ್ತುವರಿ ಮಾಡಿ ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದವರಿಗೆ 7 ವರ್ಷ ಜೈರು ಹಾಗೂ ರೂ.100 ಕೋಟಿವರೆಗೆ ದಂಡ ವಿಧಿಸಬಹುದಾಗಿರುತ್ತದೆ.
ಗಂಗಾ ನದಿ ಹಾಗೂ ಅದರ ಉಪನದಿಗಳ ಸುತ್ತಲಿನ 1 ಕಿ.ಮೀ ದೂರದ ಪ್ರದೇಶವನ್ನು ಜಲಸಂರಕ್ಷಣೆ ವಲ್ಯ ಎಂದು ಘೋಷಿಸಬೇಕೆಂದ ಅಂಶ ಕೂಡ ಸಮಿತಿ ತನ್ನ ಪ್ರಸ್ತಾಪದಲ್ಲಿ ತಿಳಿಸಿದೆ.
Comments