ಮಾತೃಭಾಷೆ ಯಾವುದೇ ಇರಲಿ ಕನ್ನಡ ಕಲಿಯಬೇಕು

ಬೆಂಗಳೂರು: ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ತಮ್ಮ ಮಾತೃಭಾಷೆ ಯಾವುದೇ ಇದ್ದರು ಕನ್ನಡ ಕಲಿಯಬೇಕು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಿವಾಜಿ ನಗರದ ಸುಸಜ್ಜಿತ ಸರ್ಕಾರಿ ಹೈಟೆಕ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ನಾವೆಲ್ಲ ಕನ್ನಡಿಗರು, ಆಮೇಲೆ ಧರ್ಮ, ಭಾಷೆ ವಿಚಾರದಲ್ಲಿ ಜಾತಿ ಧರ್ಮ ಬರುವುದಿಲ್ಲ, ಕನ್ನಡ ನಾಡಿನಲ್ಲಿರುವವರು ಕನ್ನಡ ಕಲಿಯಬೇಕು ಎಂದರು.
ಸಚಿವ ರೋಷನ್ ಬೇಗ್ ಉರ್ದು ಶಾಲೆಯಲ್ಲಿ ಕಲಿತವರು, ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ಅವರ ತಂದೆಗೆ ಕನ್ನಡ ಬರುತ್ತಿರಲಿಲ್ಲ, ಸದನದಲ್ಲಿ ಇಂಗ್ಲೀಷ್ ನಲ್ಲೇ ಮಾತನಾಡುತ್ತಿದ್ದರು, ಇದನ್ನು ವಾಟಾಳ್ ನಾಗರಾಜ್ ವಿರೋಧಿಸುತ್ತಿದ್ದರು ಎಂದು ಹೇಳಿದರು. ಇದೇ ವೇಳೆ ಸಚಿವ ರೋಷನ್ ಬೇಗ್ ಪುತ್ರನ ರಾಜಕೀಯ ಎಂಟ್ರಿಗೆ ಸಿಎಂ ಗ್ರೀನ್ ಸಿಗ್ನಲ್ ತೋರಿದರು. ನೀನು ಲೋಕಸಭೆಗೆ ಹೋಗಿ ವಿಧಾನಸಭೆಗೆ ಕಳುಹಿಸಪ್ಪ ಎಂದು ರೋಷನ್ ಬೇಗ್ ಗೆ ಸಿಎಂ ಸೂಚಿಸಿದರು.
Comments