ನಾಳೆ GST ಮಂಡಳಿ ಸಭೆ
ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಮಂಡಳಿ ಭಾನುವಾರ ಸಭೆ ಸೇರಲಿದ್ದು, ಕೆಲವು ತೆರಿಗೆ ದರಗಳ ಪರಿಶೀಲನೆ ನಡೆಸಲಿದೆ. ಪರಿಶೀಲನೆ ನಡೆಸುವಂತೆ ವರ್ತಕರು ಮತ್ತು ಉದ್ಯಮ ವಲಯಗಲಉ ಒತ್ತಾಯಪಡಿಸಿದ್ದು, ತೆರಿಗೆ ದರಗಳ ಮರು ಪರಿಶೀಲನೆ ಮತ್ತು ಜಿಎಸ್ ಟಿ ಕರಡು ನಿಯಮಗಳಿಗೆ ತಂದಿರುವ ತಿದ್ದುಪಡಿಗೆ ಒಪ್ಪಿಗೆ ನೀಡುವುದು ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮಾಧ್ಯಮ ಗಾತ್ರದ ಹೈಬ್ರಿಡ್ ಕಾರುಗಳಿಗೆ ಜಿಎಸ್ ಟಿಯಲ್ಲಿ ಒಟ್ಟು ಶೇ ೪೩ ರಷ್ಟು ತೆರಿಗೆ ವಿಧಿಸಲಾಗಿದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಶೇ ೩೦.೩ರಷ್ಟಿದೆ. ತೆರಿಗೆ ದರ ಪರಿಶೀಲನೆ ಮಾಡುವಂತೆ ವಾಹನ ಉದ್ಯಮ ಬೇಡಿಕೆ ಸಲ್ಲಿಸಿದೆ.
ಕ್ಲಿಯರ್ ಟ್ಯಾಕ್ಸ್ ನಿಂದ ಜಿಎಸ್ ಟಿ ತಂತ್ರಾಂಶ : ಐಟಿ ಲೆಕ್ಕಪತ್ರ ಸಲ್ಲಿಕೆಯ ಅಂತರ್ಜಾಲ ತಾಣವಾಗಿರುವ ಕ್ಲಿಯರ್ ಟ್ಯಾಕ್ಸ್ ಜಿಎಸ್ ಟಿತಂತ್ರಾಂಶ ಬಿಡುಗಡೆ ಮಾಡಿದೆ. ಉದ್ಯಮಿ ಗಳಿಗೆ GST Biz ಮತ್ತು ಲೆಕ್ಕಪತ್ರ ಪರಿಶೋಧಕರಿಗೆ GST ವಗೆ ತಂತ್ರಾಂಶ ನೆರವಾಗಲಿದೆ.
ಉದ್ಯಮವರ್ಗದ ಜತೆ ಸುದೀರ್ಘ ಮಾತುಕತೆ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಂಡಿದ್ದೇವೆ, ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಐ.ಟಿ ರಿಟರ್ನ್ಸ್ ಸಲ್ಲಿಕೆ ಸುಲಭಗೊಳಿಸಲಾಗಿದೆ ಎಂದು ಕ್ಲಿಯರ್ ಟ್ಯಾಕ್ಸ್ ಸ್ಥಾಪಕ ಅರ್ಚಿತ್ ಗುಪ್ತಾ ಅವರು ತಿಳಿಸಿದ್ದಾರೆ.
Comments