ರೈತರ ಖಾತೆಗೆ ೧ ರೂ ಪರಿಹಾರ ನೀಡಿದ ಸರ್ಕಾರ

09 Jun 2017 2:33 PM | General
439 Report

ಧಾರವಾಡ: ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡ ರೈತರಿಗೆ ೧ ರೂ ಪರಿಹಾರ ರಾಜ್ಯ ಸರ್ಕಾರ ನೀಡಿದೆ.  ಬೆಳೆ ವಿಮೆ ಪರಿಹಾರವಾಗಿ ರೈತರ ಖಾತೆಗೆ ೧ ರೂ ಜಮೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು. ಪರಿಹಾರವಾಗಿ ರೈತರೊಬ್ಬರಿಗೆ ೧ ರೂ.ಪರಿಹಾರ ನೀಡಿದೆ.

ಧಾರವಾಡ ಜಿಲ್ಲಾಡಳಿತ ನಿರ್ಲಕ್ಷಕ್ಕೆ ರೈತರು ಕಂಗಲಾಗಿದ್ದಾರೆ. ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣ ಇಲ್ವಾ? ಸರ್ಕಾರದ ಖಜಾನೆ ಖಾಲಿಯಾಗಿದ್ದೇಯಾ,  ಅನ್ನದಾತರಿಗೆ ಸರ್ಕಾರ ಅವಮಾನಿಸುತ್ತಿದೆಯಾ ಎಂದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧಾರವಾಡದ ಉಪ ವಿಭಾಗಧಿಕಾರಿ ಮಹೇಶ್ ಕರ್ಜಗಿ, ಖಾತೆ ಖಚಿತಪಡಿಸಿಕೊಳ್ಳಲು ೧ ರೂ ಜಮೆ ಮಾಡಲಾಗಿದ್ದು, ಜಮೀನು, ಖಾತೆ ಖಚಿತಪಡಿಸಿಕೊಳ್ಳಲು ೩೫೦೦ ರೈತರ ಖಾತೆಗೆ ೧ ರೂ ಜಮೆ ಮಾಡಲಾಗಿದೆ. ಉಳಿದ ರೈತರ ಖಾತೆಗೆ ಆಧಾರ ಕಾರ್ಡ್ ಲಿಂಕ್ ಆಗಿಲ್ಲ. ಜಿಲ್ಲೆಯಲ್ಲಿ ೮೭ ರೈತರ ಪೈಕಿ ೮೪ ರೈತರಿಗೆ ಪರಿಹಾರ ನೀಡಲಾಗಿದೆ ಎಂದರು.

Edited By

venki swamy

Reported By

Sudha Ujja

Comments