ಚಿನ್ನ ಖರೀದಿಯಲ್ಲಿ ಟಾಪ್ -೧ ಸ್ಥಾನದಲ್ಲಿ ಕೇರಳ

ನವದೆಹಲಿ: ಭಾರತೀಯರಿಗೆ ಚಿನ್ನದ ಮೇಲೆ ಎಷ್ಟರ ಮಟ್ಟಿಗೆ ಆಸಕ್ತಿ ಇದೆ ಎಂದರೆ ಚಿನ್ನಗೆ ನೀಡಿರುವ ಪ್ರಾಮುಖ್ಯತೆ ಬೇರೆ ಯಾವುದಕ್ಕೂ ನೀಡುವುದಿಲ್ಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ಪ್ರಕಾರ. ೨೦೧೭ರ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಕಾಯ್ದಿಡಲಾಯಿತು. ಮೊದಲ ತ್ರೈಮಾಸಿಕದಲ್ಲಿ ಮೌಲ್ಯ ೯೨.೩ ಟನ್ ಹೆಚ್ಚಾಯಿತು.
ಅತಿ ಹೆಚ್ಚು ಚಿನ್ನ ಖರೀದಿಯಾಗುವ ಸ್ಥಳವೆಂದರೆ ಅದು ಕೇರಳ ರಾಜ್ಯಕ್ಕೆ ಸಲ್ಲುತ್ತದೆ. ಈ ರಾಜ್ಯ ಚಿನ್ನ ಖರೀದಿಯಲ್ಲಿ ಮೊದಲನೇಯ ಸ್ಥಾನ ಪಡೆದುಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಜನರು ಚಿನ್ನ ಖರೀದಿಸಲು ಪ್ರತಿಯೊಬ್ಬ ವ್ಯಕ್ತಿ ಸರಾಸರಿ ೨೦೮.೫ ರೂಗಳಷ್ಟು ಖರ್ಚು ಮಾಡುತ್ತಾರೆ. ನಗರ ಪ್ರದೇಶದಲ್ಲಿ ಸುಮಾರು ೧೮೮.೯೫ರಷ್ಟು. ಭಾರತದ ಕೆಲವು ಕಡೆಗಳಲ್ಲಿ ಅತಿ ಕಡಿಮೆ ಮತ್ತು ಅತಿ ಹೆಚ್ಚು ಚಿನ್ನವನ್ನು ಖರೀದಿ ಮಾಡಲಾಗುತ್ತದೆ.
Comments