ಶತಾಯುಷಿ ಸಿದ್ದಗಂಗಾ ಶ್ರೀಗಳಿಗೆ 'ಸಾರ್ವಭೌಮ' ಪ್ರಶಸ್ತಿ
ತುಮಕೂರು : ಸಿದ್ದಗಂಗಾ ಮಠಾಧೀಶ, ಶತಾಯುಷಿ ಡಾ .ಶಿವಕುಮಾರ ಸ್ವಾಮೀಜಿ ಅವರಿಗೆ ಬುಧವಾರ ಗೋಕರ್ಣದ ಶ್ರೀರಾಮಚಂದ್ರಾಪುರ ಮಠದ ವತಿಯಿಂದ 'ಸಾರ್ವಭೌಮ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿದ್ದಗಂಗಾದ ಹಳೆಯ ಮಠದಲ್ಲಿ ಗೋಕರ್ಣದಲ್ಲಿರುವ ಮಹಾಬಲೇಶ್ವರ ಆತ್ಮಲಿಂಗದ ಪ್ರತಿರೂಪವಾದ 1.10 ಕೆ.ಜಿ. ತೂಕದ ಬೆಳ್ಳಿಯ ಆತ್ಮಲಿಂಗರೂಪಿ ಫಲಕವನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು. ಹಳೆಯ ಮಠದಲ್ಲಿ ಸೇರಿದ್ದ ರಾಜ್ಯದ ವಿವಿಧ ಮಠಗಳ ಮಠಾಧೀಶರು 'ನಡೆದಾಡುವ ದೇವರು' ಎಂದೇ ಭಕ್ತರ ಮನದಲ್ಲಿ ಸ್ಥಾನ ಪಡೆದಿರುವ ಶ್ರೀಗಳ ಗುಣಗಾನ ಮಾಡುತ್ತಿದ್ದರು. ಇತ್ತೀಚೆಗಷ್ಟೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಶ್ರೀಗಳು ಈಗ ಚೇತರಿಸಿಕೊಂಡಿದ್ದು, ಭಕ್ತರಿಗೆ ದರ್ಶನ, ಆಶೀರ್ವಾದ ನೀಡಲು ಮಧ್ಯಾಹ್ನವೇ ಹಳೆಯ ಮಠಕ್ಕೆ ಬಂದು, ಆಸೀನರಾಗಿದ್ದರು.
Comments