GST ಜುಲೈಯಿಂದ ದೇಶಾದಾದ್ಯಂತ ಜಾರಿ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ಮಸೂದೆ ಒಪ್ಪಿಗೆ ನೀಡಲು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆಯನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆ ಮಂಡಿಸಿದರು. ಜಿಎಸ್ ಟಿ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಜೆಡಿಎಸ್ ವೈ.ಎಸ್ ವಿ ದತ್ತಾ ಮತ್ತಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಬರುವ ಜುಲೈನಿಂದ ಜಿಎಸ್ ಟಿ ಮಸೂದೆ ದೇಶಾದಾದ್ಯತ ಜಾರಿಗೆ ಬರಲಿದೆ. ಅದಕ್ಕೂ ಮೊದಲು ರಾಜ್ಯಗಳು ಕೇಂದ್ರದ ಮಸೂದೆ ಮಂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸರಕು ಹಾಗೂ ಸೇವೆಗಳ ಮೇಲೆ ತೆರಿಗೆ ವಿಧಿಸಲು ಹಾಗೂ ಸಂಗ್ರಹಿಸಲು ಉಪಬಂಧ ಕಲ್ಪಿಸುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗುತ್ತದೆ ಎಂದು ಸಿಎಂ ಹೇಳಿದರು.
ಜೆಡಿಎಸ್ ವೈ.ಎಸ್ ವಿ ದತ್ತಾ ಹಾಗೂ ಬಿಜೆಪಿಯ ಬಸವರಾಜ್ ಬೊಮ್ಮಾಯಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ರೂಪಿಸಿರುವ ಮಸೂದೆಯಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ. ವಿಧಾನಸಭೆ ಅನುಮೋದನೆ ನೀಡುವುದು ಒಂದು ಔಪಚಾರಿಕ ಪ್ರಕ್ರಿಯೆ ಅಷ್ಟೆ ಎಂದು ಹೇಳಿದರು.
ಜೆಎಸ್ ಟಿ ಸಂಬಂಧ ಸಾಮಾನ್ಯ ಜನರಲ್ಲಿ ಹಲವು ಪ್ರಶ್ನೆಗಳಿವೆ. ಅದರ ವಿಧಿ-ವಿಧಾನಗಳು ಹಾಗೂ ತೊಂದರೆಗಳ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಚರ್ಚೆ ಮಾಡಿದ್ದರೆ, ಜನರ ಗೊಂದಲಗಳು ನಿವಾರಣೆ ಆಗುತ್ತಿತ್ತು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
Comments