ಇಪಿಎಫ್ಒ ಗೆ ಆಧಾರ ಲಿಂಕ್ ೩೦ ಜೂನ್ ಗೆ ವಿಸ್ತರಣೆ
ದೆಹಲಿ: ಆಧಾರ ಸಂಖ್ಯೆಯನ್ನು ಇಪಿಎಫ್ಒ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡಲು ಜೂನ್ ೩೦ರವರೆಗೆ ಕಡೆಯ ದಿನವಾಗಿರಲಿದೆ. ಈಶಾನ್ಯ ರಾಜ್ಯಗಳವರೆಗೆ ಆಧಾರ ಲಿಂಕ್ ಮಾಡಲು ಸೆಪ್ಟೆಂಬರ್ ೩೦ರವರೆಗೆ ಅವಧಿ ವಿಸ್ತರಣೆಗೊಳ್ಳಲಿದೆ.
ಈಶಾನ್ಯ ರಾಜ್ಯದವರನ್ನು ಹೊರತುಪಡಿಸಿ ೧೯೯೫ರ ಎಂಪ್ಲಾಯಿಸ್ ಪೆನ್ಶನ್ ಸ್ಕೀಮ್ ಅಡಿ ಬರುವ ಹೊಸ ಉದ್ಯೋಗಿಗಳ ಆಧಾರ ಸಂಖ್ಯೆಯನ್ನು ಇಪಿಎಫ್ಒಗೆ ಉದ್ಯೋಗದಾತರು ಲಿಂಕ್ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಜುಲೈ ೧ರಿಂದ ಇದು ಅನ್ವಯವಾಗಲಿದ್ದು, ಈಶಾನ್ಯದವರಿಗೆ ಅಕ್ಟೋಬರ್ ೧ರಿಂದ ಅನ್ವಯವಾಗಲಿದೆ.
ಭವಿಷ್ಯದಲ್ಲಿ ಭವಿಷ್ಯ ನಿಧಿ ಲಾಭ ಪಡೆಯಲು ಎಲ್ಲಾ ಸದಸ್ಯರು ಮತ್ತು ಪಿಂಚಣಿದಾರರು ತಮ್ಮ ಆಧಾರ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು/ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ.
Comments