Award.. ಇದು ವಿಶ್ವದ ಅತ್ಯಂತ ಸುಂದರ ಕಾರು

ಮುಂಬೈ: ರೆನಾಲ್ಟ್ ಸಂಸ್ಥೆ ಇತ್ತೀಚೆಗೆ ವಿದ್ಯುಚ್ಚಾಲಿತ ಸೂಪರ್ ಕಾರನ್ನು ಪರಿಚಯಿಸಿದೆ. ಕಾಲಕ್ಕೆ ತಕ್ಕಂತ ಕಾರು ಅತ್ಯುತ್ತಮ ವಿನ್ಯಾಸ ಹಾಗೂ ತಂತ್ರಜ್ಞಾನ ಇದರಲ್ಲಿ ಅಡಕವಾಗಿದೆ. ಆದ್ರೆ ಈ ಕಾರ್ ಗೆ ಇದೀಗ ವಿಶ್ವದ ಸುಂದರ ಕಾರು ಎಂಬ ಪ್ರಶಸ್ತಿ ಪಡೆದುಕೊಂಡಿದೆ.
ಇಟಲಿಯಲ್ಲಿ ಮೇ ೨೮ ಹಾಗೂ ೨೬ರಂದು ನಡೆದ ಕಾರುಗಳ ಸ್ಪರ್ಧೆಯಲ್ಲಿ ‘Trezo’r ವಿಶ್ವದ ಅತ್ಯಂತ ದುಬಾರಿ ಮತ್ತು ಸುಂದರ ಕಾರು ಎಂಬ ಅವಾರ್ಡ್ ಪಡೆದು ಎಲ್ಲರ ಗಮನ ಸೆಳೆದಿದೆ. ಇಷ್ಟೇ ಅಲ್ದೇ, ‘Trezor ’ಕಾರು ಜಿನೀವಾ ಮೋಟಾರ್ ಷೋನಲ್ಲಿ ೨೦೧೬ರಲ್ಲಿ ‘ಕಾನ್ಸೆಪ್ಟ್ ಆಫ್ ದಿ ಇಯರ್’ ಎಂಬ ಪ್ರಶಸ್ತಿ ಕೂಡ ಪಡೆದುಕೊಂಡಿದೆ. ಈಗಾಗ್ಲೇ ಸೂಪರ್ ಕಾರನ್ನು ಪ್ಯಾರಿಸ್ ಮೋಟಾರ್ ಶೋ ರೂಂನಲ್ಲಿ ಪ್ರದರ್ಶನಗೊಳಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ಈ ಕಾರು ತಯಾರಿಕಾ ಕಂಪನಿಯ ಶ್ರಮ ಸಾಕಷ್ಟಿದೆಯಂತೆ. ೨೦೨೦ರ ವೇಳೆಗೆ ಸೆಲ್ಫ್ ಡ್ರೈವಿಂಗ್ ಸಿಸ್ಟಮ್ ಕೂಡ ತಯಾರಾಗಲಿದೆಯಂತೆ.
Comments