500 ಗ್ರಾಮಗಳನ್ನು ದತ್ತು ಪಡೆಯಲಿರುವ ಅನಿವಾಸಿ ಭಾರತೀಯರು

ನವ ದೆಹಲಿ: ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು (NRI) ಭಾರತದ ೫೦೦ ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಿದೆ. ಭಾರತದಲ್ಲಿರುವ ಹಳ್ಳಿಗಳನ್ನು ಅಭಿವೃದ್ಧಿಪಡಿಸುವ ಅಂಗವಾಗಿ ಭಾರತದಲ್ಲಿ ಸುಮಾರು ೫೦೦ ಹಳ್ಳಿಗಳನ್ನು ದತ್ತು
ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದರ ಅಂಗವಾಗಿ ಜುಲೈ ೧ರಂದು ಸಿಲಿಕಾನ್ ವೆಲ್ಲಿಯಲ್ಲಿ ಬಿಗ್ ಐಡಿಯಾಸ್ ಫಾರ್ ಬೆಟರ್ ಇಂಡಿಯಾ ಎಂಬ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಆಯೋಜನೆ ಮಾ಼ಡಿರುವ ಸಮ್ಮೇಳನದಲ್ಲಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಉಪನ್ಯಾಸ
ನೀಡಲಿದ್ದು, ಈ ಕಾರ್ಯಕ್ರಮದಲ್ಲಿ ೧,೦೦೦ ಅನಿವಾಸಿ ನಾಗರಿಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಹಾಗೂ ನಿರುದ್ಯೋಗ ಹೋಗಲಾಡಿಸಲು ತಕ್ಷಣ ನೆರವಿಗೆ ಬರುವಂತೆ ೫೦೦ ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
Comments