ಬಿ.ಇಡಿ ಪ್ರಶ್ನೆ ಪತ್ರಿಕೆ ಸೋರಿಕೆ?

ಗುಲಬರ್ಗಾ: ಕಲಬುರ್ಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಮಾಗ್ರಿ, ಕೌಶಲ್ಯ ಹಾಗೂ ವಿಧಾನ ವಿಷಯದ ಪ್ರಶ್ನೆಪತ್ರಿಕೆ ರಾತ್ರಿ ಬಹಿರಂಗ ಗೊಂಡಿದ್ದು ಇವತ್ತು ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಮಾಗ್ರಿ, ಕೌಶಲ್ಯ ಮತ್ತು ವಿಧಾನ ವಿಷಯದ ಪ್ರಶ್ನೆಪತ್ರಿಕೆ ರಾತ್ರಿ ಬಹಿರಂಗಗೊಂಡರು ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿದ್ಯಾರ್ಥಿಗಳು ಬಹಿರಂಗ ಪಡಿಸಿದ್ದಾರೆ.
ವಿವಿ ಬಿ.ಇಡಿ ಪ್ರಶ್ನೆ ಪತ್ರಿಕೆ ವಾಟ್ಸಪ್ ನಲ್ಲಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಮೌಲ್ಯಮಾಪನ ಕುಲ ಸಚಿವ ಡಾ.ಸಿ.ಎಸ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಬಹಿರಂಗಗೊಂಡ ಪ್ರಶ್ನೆ ಪತ್ರಿಕೆ ಮೇಲೆ ವಿವಿ ಬಾರ್ ಕೋಡ್ ಇಲ್ಲ. ವಿವಿಯ ಪ್ರತಿಯೊಂದು ಪತ್ರಿಕೆಯ ಮೇಲೆ ಬಾರ್ ಕೋಡ್ ಗಳಿರುತ್ತವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಕುಲಸಚಿವರು ಹೇಳಿದ್ದಾರೆ.
Comments