ಕೆಆರ್ ಎಸ್ ನವೀಕರಣಕ್ಕೆ ಉತ್ಕೃಷ್ಟ ಪುನಶ್ಚೇತನ ಪ್ರಶಸ್ತಿ

ಮೈಸೂರು: ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯ ಇದೀಗ ಸಂಪೂರ್ಣ ದುರಸ್ತಿಗೊಂಡಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಇದರ ನಡುವೆಯೇ ಸುಮಾರು ಒಂದು ವರ್ಷಗಳ ಕಾಲ ನಡೆದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಡೆಸಿದಕ್ಕೆ ವಿಶ್ವಬ್ಯಾಂಕ್ ಹಾಗೂ ಅಣೆಕಟ್ಟು ಅಭಿವೃದ್ಧಿ ಪ್ರಾಜೆಕ್ಟ್ ಉತ್ಕೃಷ್ಟ ಪುನಶ್ಚೇತನ ಪ್ರಶಸ್ತಿ ನೀಡಿ ಗೌರವಿಸಿದೆ.
ಕೆಆರ್ ಎಸ್ ಜಲಾಶಯದ ಪುನಶ್ಚೇತನ ಕಾಮಗಾರಿಯನ್ನು ಸುಮಾರು 36.60 ಕೋಟಿ ರೂ ವೆಚ್ಚದಲ್ಲಿ ನಡೆಸಲಾಗಿತ್ತು. ಇದರ ಜವಬ್ದಾರಿಯನ್ನು ಮಧ್ಯಪ್ರದೇಶದ ಕಂಪನಿಯೊಂದು ವಹಿಸಿಕೊಂಡಿತ್ತು.[ವಿವಾದಿತ 'ನಾನು ಕನ್ನಂಬಾಡಿ ಕಟ್ಟೆ' ಆತ್ಮಕಥೆ ಪುಸ್ತಕ ಬಿಡುಗಡೆ]
2016ರಲ್ಲಿ ಆರಂಭವಾದ ಕಾಮಗಾರಿ 2017ರವರೆಗೆ ನಡೆದಿತ್ತು. ಸುಮಾರು ಒಂದುವರ್ಷಗಳ ಅವಧಿಯಲ್ಲಿ ಅಫ್ಟೀನ್ ಪಾಯಿಂಟಿಂಗ್, ಕ್ಯಾವಿಟಿ ಫಿಲ್ಲಿಂಗ್, ಹಾರಿಜಾಂಟಲ್ ಗ್ರೋಟಿಂಗ್ ಅಫ್ಟಿಂಗ್ ಟ್ರೀಟ್ ಮೆಂಟ್, ವರ್ಟಿಕಲ್ ಗ್ರೋಟಿಂಗ್ ಅಫ್ಟಿಂಗ್ ಟ್ರೀಟ್ ಮೆಂಟ್ ಹೀಗೆ ಜಲಾಶಯದ ದುರಸ್ತಿಗೆ ಸಂಬಂಧಿಸಿದ ಹಲವು ಕಾಮಗಾರಿಗಳನ್ನು ನಡೆಸಲಾಗಿತ್ತು. ಇದಕ್ಕೆ ವಿಶ್ವಬ್ಯಾಂಕ್ ನೆರವು ನೀಡಿತ್ತು.
ಜಲಾಶಯದ ಆಧುನೀಕರಣದ ಕಾಮಗಾರಿಗಳು ಕೃಷ್ಣರಾಜಸಾಗರ ಜಲಾಶಯದ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ಅವರ ಮೇಲುಸ್ತುವಾರಿಯಲ್ಲಿ ವಿವಿಧ ಇಂಜಿನಿಯರ್ ಗಳ ಸಲಹೆ, ಸಹಕಾರದೊಂದಿಗೆ ನಡೆಸಲಾಗಿತ್ತು.
ಕಾಮಗಾರಿ ಬಳಿಕ ವಿಶ್ವಸಂಸ್ಥೆ ಮತ್ತು ಅಣೆಕಟ್ಟೆ ಪುನಶ್ಚೇತನ ಕಾಮಗಾರಿ ವಿಶೇಷ ತಂಡ ಕೆಆರ್ ಎಸ್ ಗೆ ಆಗಮಿಸಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಉತೃಷ್ಟ ಪುನಶ್ಚೇತನ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು.
ಅದರಂತೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಲಸಂಪಲನ್ಮೂಲ ಇಲಾಖೆ ಇಂಜಿನಿಯರ್ ಪ್ರಭಾಕರ್ ಹಾಗೂ ಪುನಶ್ಚೇತನ ಕಾಮಗಾರಿ ನಿರ್ದೇಶಕ ಮಾಧವ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.ಕೆಆರ್ ಎಸ್ ಜಲಾಶಯದೊಂದಿಗೆ ಇತರೆ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕಬಿನಿ, ತುಂಗಭದ್ರಾ ಸೇರಿದಂತೆ ಸುಮಾರು 29 ಜಲಾಶಯಗಳಲ್ಲಿ ಪುನಶ್ಚೇತನ ಕಾಮಗಾರಿ ನಡೆಸಿರುವುದನ್ನು ಕಾಣಬಹುದಾಗಿದೆ.
Comments