ಇಂದು ಜಿಎಸ್ಎಲ್ ವಿ ಎಂಕೆ ೩ ರಾಕೆಟ್ ಉಡಾವಣೆ
ನಾಲ್ಕು ಟನ್ ತೂಕದ ಉಪಗ್ರಹಗಳನ್ನು ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಸೇರಿಸುವ ಸಾಮರ್ಥ್ಯವಿರುವ ಜಿಎಸ್ಎಲ್ ವಿ ಎಂಕೆ ೩ ರಾಕೆಟ್ ಇಂದು ಉಡಾವಣೆಗೊಳ್ಳಲಿದೆ. ಇದರ ಅಂಗವಾಗಿ ಸಂಜೆ ೫.೨೮ಕ್ಕೆ ಜಿಸ್ಯಾಟ್- ೧೯ ಉಪಗ್ರಹಗಳನ್ನು ಹೊತ್ತು, ಭಾರತದ ಅತ್ಯಂತ ದೈತ್ಯ ರಾಕೆಟ್ ಜಿಎಸ್ಎಲ್ ವಿ ಮಾರ್ಕ್ ೩ ಬಾಹ್ಯಾಕಾಶದತ್ತ ಜಿಗಿಯಲಿದೆ.
ಜಿಸ್ಯಾಟ್ -೧೯ ಈವರೆಗಿನ ಭಾರತದ ಅತ್ಯಂತ ದೊಡ್ಡ ಉಪಗ್ರಹವಾಗಿದ್ದು, ಸಂಪೂರ್ಣ ದೇಶಿಯವಾಗಿ ಅಭಿವೃದ್ಧಿಪಡಿಸಿದ ಹಲವು ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬೇರೆ ಕ್ಷೇತ್ರಗಳ ಬಳಕೆಗೂ ಮುಕ್ತವಾಗಲಿದೆ ಎಂದು ಇಸ್ರೋ ಹೇಳಿದೆ.
ದೇಶದ ಉಪಗ್ರಹಗಳ ಕ್ಷೇತ್ರದಲ್ಲಿ ಬಾರೀ ಕ್ರಾಂತಿಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಸಿದ್ಧತೆ ನಡೆಸಿದ್ದು, ಭಾರೀ ವೇಗದ ಮತ್ತು ಉಪಗ್ರಹ ಆಧರಿತ ಅಂತರ್ಜಾಲ ಸಂಪರ್ಕ ಸೇವೆಯನ್ನು ಆರಂಭಿಸಲು ಎರಡು ದೈತ್ಯ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ.
Comments