ಏರ್ ಏಷಿಯಾ ಬಿಗ್ ಏರ್ ಟಿಕೆಟ್ ಆಫರ್
ದೇಶಾದ್ಯಂತ ಸುತ್ತಾಡಲು, ಪ್ರವಾಸ ಕೈಗೊಳ್ಳಲು ನೀವು ಸಿದ್ಧರಿದ್ದೀರಾ? ನಿಮ್ಮ ಕನಸು ನನಸಾಗುವ ಸಮಯ ಇದೀಗ ಬಂದಿದೆ. ಏರ್ ಏಷಿಯಾ ಪರಿಚಯಿಸುತ್ತಿದೆ ಬಿಗ್ ಧಮಾಕಾ ಆಫರ್, ಏರ್ ಏಷಿಯಾ ಅಂತರಾಷ್ಟ್ರೀಯ ವಿಮಾನಯಾನಗಳಿಗೆ ರಿಯಾಯಿತಿ ಘೋಷಣೆ ಮಾಡಿದೆ.
ಏರ್ಲೈನ್ಸ್ ಕಂಪನಿ ಬಿಗ್ ಆಫರ್ ವೊಂದನ್ನು ಪ್ರಯಾಣಿಕರಿಗೆ ನೀಡಿದೆ. ಇನ್ಮೇಲೆ ಸಾವಿರಾರು ರೂ. ನೀಡಿ ವಿಮಾನದಲ್ಲಿ ಪ್ರಯಾಣಕ್ಕಾಗಿ ಖರ್ಚು ಮಾಡುವಂತಿಲ್ಲ. 3 ಸಾವಿರ ಕಡಿಮೆ ವೆಚ್ಚದಲ್ಲಿ ಎಂದರೆ ೧,೦೯೯ ರೂ.ಯಲ್ಲಿ ವಿದೇಶಿ ಪ್ರವಾಸ ಮಾಡಬಹುದು. ಈ ಆಫರ್ ಕೇವಲ ಲಿಮಿಟೆಡ್ ಸಮಯದವರೆಗೂ ಇರಲಿದ್ದು, ನೀವು ರಾಷ್ಟ್ಪೀಯ ವಿಮಾನ ಪ್ರಯಾಣ ೧,೦೯೯ರೂ.ಗೆ ಹಾಗೂ ಅಂತರಾಷ್ಟ್ರೀಯ ಪ್ರಯಾಣ ೨,೯೯೯ರೂ ಪಡೆಯುವ ಅವಕಾಶ ಒದಗಿಸಲಾಗಿದೆ.
ರಾಷ್ಟ್ರೀಯ ವಿಮಾನ ಪ್ರಯಾಣ ಬೆಂಗಳೂರು, ದೆಹಲಿ, ಹೈದ್ರಾಬಾದ್, ಕೊಚ್ಚಿ, ಗೋವಾ ಹಾಗೂ ಶ್ರೀನಗರ, ರಾಂಚಿ, ಕೋಲ್ಕತ್ತಾಗೆ ಬುಕ್ ಮಾಡಬಹುದು. ಟಿಕೆಟ್ ಬುಕಿಂಗ್ ಮಾಡಲು ೪ ಜೂನ್ ನಿಂದ ಆರಂಭವಾಗಿ ಜೂನ್ ೧೧ರ ವರೆಗೂ ಇರಲಿದೆ. ಅಂತರಾಷ್ಟ್ರೀಯ ವಿಮಾನ ಪ್ರಯಾಣ ಬ್ಯಾಂಕಾಕ್ ಇತರ ಸ್ಥಳಗಳಿಗೆ ಟಿಕೆಟ್ ಬುಕ್ ಮಾಡಬಹುದು.
Comments