ಇಂದು ವಿಧಾನಮಂಡಲ ಅಧಿವೇಶನ..ಪ್ರತಿಪಕ್ಷಗಳ ತಂತ್ರ

ಬೆಂಗಳೂರು : ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಹತ್ತು ದಿನಗಳವರೆಗೂ ಅಧಿವೇಶನ ನಡೆಯಲಿದೆ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಎತ್ತಿ ತೋರಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ.
ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಮಾತ್ರ ಉಳಿದಿರುವುದರಿಂದ ರಾಜ್ಯ ಸರ್ಕಾರ ವೈಫಲ್ಯಗಳನ್ನು ಪಟ್ಟಿ ಮಾಡಿ, ರಾಜಕೀಯ ಲಾಭ ಪಡೆದುಕೊಳ್ಳಲು ವಿರೋಧ ಪಕ್ಷಗಳು ತಂತ್ರ ರೂಪಿಸಿವೆ. ವಿರೋಧ ಪಕ್ಷಗಳನ್ನು ಹಣಿಯಲು ಪಕ್ಷವು ಪ್ರತಿ ತಂತ್ರ ರೂಪಿಸಿದೆ.
ಆಹಾರ ಇಲಾಖೆ ಆಯುಕ್ತರಾಗಿ ಅನುರಾಗ್ ತಿವಾರಿ ಅಸಹಜ ಸಾವು, ಹಿರಿಯ ಅಧಿಕಾರಿಗಳಿಗೆ ಕಿರುಕುಳ, ಭ್ರಷ್ಟಾಚಾರ ಹಗರಣ, ಕೆಲವು ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಪ್ರಸ್ತಾಪಿಸಿ ಕಾನೂನು ಸುವವ್ಯವಸ್ಶೆ ಹದಗೆಟ್ಟಿದೆ ಎಂದು ವಿರೋಧ
ಪಕ್ಷಗಳು ಗದ್ದಲ ಎಬ್ಬಿಸಲಿವೆ.
ಜಿಎಸ್ ಟಿ ರೈತರ ಸಾಲ ಮನ್ನಾ ವಿಷಯವನ್ನು ಪ್ರಸ್ತಾಪಿಸಿ ಕೋಲಾಹಲ ಸೃಷ್ಟಿಸಲು ಜೆಡಿಎಸ್ ಅಣಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪರಸ್ಪರ ಆರೋಪ ಮತ್ತು ಪ್ರತ್ಯೋರೋಪದಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತರ ಬೆಳೆ ಪರಿಹಾರ ನೀಡಿಕೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ಜೆಡಿಎಸ್ ಚಿಂತಿಸಿದೆ.
Comments