ಭಗವದ್ಗೀತೆ ಓದುತ್ತಿದ್ದಾರಂತೆ ರಾಹುಲ್ ಗಾಂಧಿ

ಚೆನ್ನೈ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರ್ ಎಸ್ ಎಸ್ ಹಾಗೂ ಬಿಜೆಪಿಯ ವಿರುದ್ಧ ಹೋರಾಟ ತೀವ್ರಗೊಳಿಸಲು ಭಗವದ್ಗೀತೆ ಹಾಗೂ ಉಪನಿಷತ್ ಗಳನ್ನು ಓದುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭಗವದ್ಗೀತೆ, ಉಪನಿಷತ್ ಗಳಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತವೆ. ನಿಮ್ಮ ಧರ್ಮ ಹೀಗೆ ಹೇಳುತ್ತಿರುವಾಗ ಆ ಧರ್ಮದ ಸಾರಕ್ಕೆ ವಿರುದ್ಧವಾಗಿ ಹೇಗೆ ನಡೆದುಕೊಳ್ಳುತ್ತೀರಿ? ಎಂದು ಆರ್ ಎಸ್ ಎಸ್ ನವರನ್ನು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ತಮಿಳುನಾಡಿನ ಭಾಷೆ, ಸಂಸ್ಕೃತಿ, ರೀತಿ ನೀತಿಗಳ ಬಗ್ಗೆ ಹೊಗಳಿದ ರಾಹುಲ್, ತಮಿಳು ಸಿನಿಮಾಗಳನ್ನು ನೋಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು. ನನ್ನ ಸಹೋದರಿ ಪ್ರಿಯಾಂಕಾ ಕೂಡ ತಮಿಳು ಸಂಸ್ಕೃತಿಯನ್ನು ಇಷ್ಟಪಡುತ್ತಾರೆ ಎಂದರು.
Comments