ಮಕ್ಕಳ ವಿಷಯದಲ್ಲಿ ಪಾಕಿಸ್ತಾನ ಕೆಟ್ಟ ದೇಶವಂತೆ!!!



ನವ ದೆಹಲಿ: ಪಾಕಿಸ್ತಾವು ಜಗತ್ತಿನ ಅತಿ ಕೆಟ್ಟ ದೇಶ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ವಾಸ್ತವವಾಗಿ ಮಕ್ಕಳ ವಿಷಯದಲ್ಲಿ ಪಾಕ್ ಮೊಸ್ಟ್ ಡೇಂಜರ್ ದೇಶ ಎಂದು ಬಹಿರಂಗವಾಗಿದೆ. ವರದಿ ಪ್ರಕಾರ ಚಿಲ್ಡ್ರನ್ ಸೇವಿಂಗ್ಸ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಮಕ್ಕಳ ಸುರಕ್ಷಾ ವಿಷಯಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನ ಕೆಟ್ಟ ದೇಶವಾಗಿದ್ದು, ೨೪ನೇ ಸ್ಥಾನ ಪಡೆದುಕೊಂಡಿದೆ.
ಸೈಲೆಂಟ್ ಚೆಲ್ಡ್ ಹುಡ್ ಪ್ರಕಾರ, ೧೪೮ ರಾಷ್ಟ್ರಗಳಲ್ಲಿ ಪಾಕಿಸ್ತಾನವು ಅತಿ ಕೆಟ್ಟ ದೇಶ ಎಂದು ತಿಳಿದು ಬಂದಿದೆ. ಭಾರತವು ೧೧೬ನೇ, ಶ್ರೀಲಂಕಾ ೬೧ ಹಾಗೂ ಚೀನಾ ೪೧ನೇ, ಬಾಂಗ್ಲಾದೇಶ ೧೩೪ನೇ ಸ್ಥಾನ ಪಡೆದುಕೊಂಡಿವೆ.
ಇನ್ನು ಆಘಾತಕಾರಿ ವಿಷಯವೆಂದರೆ ವಿಶ್ವದದಲ್ಲಿ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗು ತನ್ನ ಬಾಲ್ಯವನ್ನು ಕಳೆದುಕೊಳ್ಳುತ್ತದೆಯಂತೆ, ೨೬ ಸಾವಿರ ಮಕ್ಕಳು ೫ ವರ್ಷ ತಲುಪುದಕ್ಕೂ ಮುನ್ನವೇ ಸಾವನ್ನಪ್ಪುತ್ತವೆ. ೧೫.೬ ಕೋಟಿ ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ ಎನ್ನಲಾಗಿದೆ.
ಈ ಅಂಕಿ ಅಂಶ ನೋಡಿದ್ರೆ ಗಾಬರಿಗೊಳಿಸುವಂತೆ ಮಾಡುತ್ತದೆ. ಇನ್ನು ೧೬ ದಶಲಕ್ಷ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ೮.೫ ಮಕ್ಕಳು ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಪ್ರಪಂಚದಲ್ಲಿ ನಿತ್ಯವು ೨೦೦ ಮಕ್ಕಳನ್ನು ಕೊಲ್ಲಲಾಗುತ್ತಿದೆ ಎಂದು ವರದಿ ಹೇಳಿದೆ.
Comments