ಅರೇ ವ್ಹಾ! ೫೦೦ ರೂಗೆ ಡ್ರೈವಿಂಗ್ ಲೈಸನ್ಸ್
ನವದೆಹಲಿ: ಜಗತ್ತಿನ ಯಾವುದೇ ದೇಶದಲ್ಲಿ ಕಾರನ್ನು ಡ್ರೈವಿಂಗ್ ಮಾಡಲು ಲೈಸನ್ಸ್ ಬೇಕೇ ಬೇಕು. ಪ್ರತಿ ದೇಶದ ಡ್ರೈವಿಂಗ್ ಲೈಸನ್ಸ್ ಪಡೆದುಕೊಳ್ಳಲು ನಿಯಮ ಬೇರೆ ಬೇರೆ ಆಗಿರುತ್ತದೆ. ಆದ್ರೆ ನಿಮಗೆ ಗೊತ್ತಾ! ಕೇವಲ ಒಂದು ಲೈಸನ್ಸ್ ನಿಂದಲೇ ನೀವೂ ಯಾವುದೇ ದೇಶದಲ್ಲಾದ್ರು ಡ್ರೈವಿಂಗ್ ಮಾಡ್ಬಹುದು. ಅದು ಹೇಗೆ ಅಂತ ಯೋಚನೆ ಮಾಡುತ್ತಿದ್ದೀರಾ! ಇಲ್ಲಿದೆ ವರದಿ.
ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವೂ ಖರ್ಚು ಮಾಡಬೇಕಾಗಿರುವುದು ಕೇವಲ ೫೦೦ ರೂ.ಗಳು . ಪದೇ ಪದೇ ನೀವೂ ವಿದೇಶಕ್ಕೆ ಪ್ರಯಾಣ ಬೆಳೆಸಬೇಕಾಗಿ ಬರಬಹುದು. ಅಲ್ಲಿ ಕಾರು ಡ್ರೈವಿಂಗ್ ಮಾಡುವ ಅವಶ್ಯಕತೆ ಎದುರಾದಾಗ, ಡ್ರೈವಿಂಗ್ ಕೂಡ ಮಾಡಬಹುದು.
ವಿದೇಶಕ್ಕೆ ಪ್ರತಿ ಬಾರಿ ಭೇಟಿ ನೀಡುವ ಜನರಿಗೆ ಈ ಸೌಲಭ್ಯ ಅನ್ವಯವಾಗಲಿದೆ.
ಇಂಟರ್ ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಮಾಡಬೇಕಾಗಿರುವುದು ಇಷ್ಟೇ. ವಾಹನದ ಪರವಾನಗಿ ಪಡೆಯಲು ಸ್ಥಳೀಯ ಆರ್.ಟಿ.ಓ ಕಚೇರಿಯಲ್ಲಿ ಅರ್ಜಿ ಹಾಕಬೇಕಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಪ್ರಮುಖ ದಾಖಲಾತಿ ಪತ್ರಗಳು ನಿಮ್ಮ ಜತೆಗಿರಬೇಕು. ಫಾರ್ಮ್ 4A ಚಾಲನಾ ಪರವಾನಗಿ ಫಾರ್ಮ್ ಸಾರಿಗೆ ಕಚೇರಿ ವೆಬ್ ಸೈಟ್ ಲ್ಲಿ ಲಭ್ಯವಿರುತ್ತದೆ.
Comments