ಸ್ವಿಸ್ ನ ಈ ಪ್ರವಾಸಿ ಸ್ಥಳದಲ್ಲಿ ಫೊಟೋ ಕ್ಲಿಕ್ ಗೆ ಬ್ಯಾನ್
ಸ್ವಿಜರ್ ಲ್ಯಾಂಡ್ : ರಜೆಯ ದಿನಗಳನ್ನು ಕಳೆಯಲು ಸ್ವಿಜರ್ ಲ್ಯಾಂಡ್ ಉತ್ತಮ ಪ್ರವಾಸಿ ಪ್ಲೇಸ್ ಗಳಲ್ಲಿ ಒಂದು. ಪ್ರವಾಸಿ ಸ್ಥಳಗಳಿಗೆ ಜನರು ಭೇಟಿ ನೀಡಿದಾಗ ಫೊಟೋ ತೆಗೆಯುವುದು ಸಾಮಾನ್ಯ. ಆದ್ರೆ ಸ್ವಿಸ್ ಪ್ರವಾಸಿ ಸ್ಥಳದಲ್ಲಿ ಫೊಟೋ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ಅವಕಾಶ ಮಾಡಿಕೊಟ್ಟಿಲ್ಲ.
ಸ್ವಿಜರ್ ಲ್ಯಾಂಡ್ ನ ಬರ್ಗುನ್ ಸ್ಥಳ ನೋಡಲು ತುಂಬಾ ಸುಂದರವಾದ, ಆಕರ್ಷಕವಾಗಿರೋ ಸ್ಥಳಗಳಲ್ಲಿ ಒಂದು. ಆದ್ರೆ ಇಲ್ಲಿನ ಶಾಸಕರು ಸಂಪೂರ್ಣವಾಗಿ ಫೊಟೋ ಕ್ಲಿಕ್ ಮಾಡುವುದನ್ನು ನಿಷೇಧಿಸಿದ್ದಾರೆ. ಹೀಗೆ ಬ್ಯಾನ್ ಮಾಡಲು ವೈಜ್ಞಾನಿಕವಾಗಿ ಕಾರಣವಿದೆಯಂತೆ.
ಸುಂದರವಾದ ವೆಕೆಷನ್ ಫೊಟೋಗಳನ್ನು ಜನರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದ್ರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರ ಮೇಲೆ ಪ್ರಭಾವ ಬೀರುತ್ತದೆಯಂತೆ. ಈ ಫೊಟೋಗಳು ಜನರಿಗೆ ಅಸಮಾಧಾನ, ಅತೃಪ್ತಿ ಉಂಟು ಮಾಡಬಹುದು. ಏಕೆಂದರೆ ಆ ವೀಕ್ಷಕ ಖುದ್ದು ಈ ಸ್ಥಳಕ್ಕೆ ಭೇಟಿ ನೀಡಿರುವುದಿಲ್ಲ. ಈ ಕಾರಣಕ್ಕಾಗಿ ಪ್ರವಾಸೋದ್ಯಮ ಇಲಾಖೆ ಫೊಟೋ ತೆಗೆಯುವುದನ್ನು ನಿಷೇಧ ಮಾಡಿದೆ.
Comments