ನೀವೂ ಟ್ವಿಟರ್ ನಲ್ಲಿ ಇದ್ದೀರಾ?.. ಪ್ರಧಾನಿಗೆ ಪ್ರಶ್ನೆ ಕೇಳಿ ಅಪಹಾಸ್ಯಕ್ಕೆ ಈಡಾದ ಪತ್ರಕರ್ತೆ

ದೇಶದಲ್ಲಿ ಹೆಚ್ಚು ಟ್ವಿಟರ್ ಹಿಂಬಾಲಕರನ್ನು ಹೊಂದಿದ್ದ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಧಾನಿ ಮೋದಿ ನಂ ೧ ಸ್ಥಾನದಲ್ಲಿದ್ದಾರೆ. ವಿಶ್ವದಲ್ಲೇ ಹೆಚ್ಚು ಫಾಲೋ ಮಾಡುವ ಸರ್ಚ್ ಮಾಡುವ ನಾಯಕರ ಪಟ್ಟಿಯಲ್ಲಿ ಮೋದಿ ೩ನೇ ಸ್ಥಾನದಲ್ಲಿದ್ದಾರೆ. ವಿಚಿತ್ರವೆಂದ್ರೆ NBC ಪತ್ರಕತ್ರೆ ಕೆಲ್ಲಿ ಎಂಬುವವರು ಪ್ರಧಾನಿ ಮೋದಿಗೆ ನೀವೂ ಟ್ವಿಟರ್ ನನ್ನು ಬಳಕೆ ಮಾಡುತ್ತೀರಾ? ಎಂದು ಕೇಳುವ ಮೂಲಕ ಮುಜುಗರಕ್ಕೆ ಈಡಾಗಿದ್ದಾರೆ.
ಚಾನಲ್ ವೊಂದರ ಪತ್ರಕರ್ತೆಯಾಗಿರುವ ಕೆಲ್ಲಿ ಯಾವುದೇ ತಯಾರಿ ಮಾಡಿಕೊಳ್ಳದೇ ಮೋದಿ ಜತೆಗೆ ಸಂದರ್ಶನಲ್ಲಿ ಭಾಗಿಯಾಗಿರುವುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.
ರಷ್ಯಾ ಪ್ರಧಾನಿ ವಾಡ್ಲಿಮಿರ್ ಪುಟಿನ್ ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ಔತಣ ಕೂಟ ಇಟ್ಕೊಂಡಿದ್ರು. ಈ ವೇಳೆ ಪ್ರಧಾನಿ ಮೋದಿ ಅವರ ಸಂದರ್ಶನ ತೆಗೆದುಕೊಳ್ಳಲು ಕೇವಲ ಓರ್ವ ಪರ್ತಕರ್ತರಿಗೆ ಆಹ್ವಾನ ಮಾಡಲಾಗಿತ್ತು.
ಪ್ರಧಾನಮಂತ್ರಿ ಮೋದಿಯವರ ಜತೆಗೆ ಕೆಲ್ಲಿ ಕೆಲಕಾಲ ಸಂವಾದ ನಡೆಸಿದ್ದರು. ಈ ವೇಳೆ ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಕೂಡ ಇದ್ದರು. ಈ ವೇಳೆ ಮೋದಿ ಹೇಳಿದ್ದು ಹೀಗಿತ್ತು. ನಾನು ನಿಮ್ಮ ಟ್ವಿಟ್ ನೋಡಿದ್ದೆ, ನೀವೂ ಕೈಯಲ್ಲಿ ಛತ್ರಿ ಹಿಡಿದುಕೊಂಡು ಫೋಸ್ ಫೋಟೋ ನೋಡಿದ್ದೆ ಎಂದು ಪ್ರಧಾನಿ ಹೇಳಿದಾಗ, ಈ ವೇಳೆ ಕೆಲ್ಲಿ ನೀವೂ ಟ್ವಿಟರ್ ನಲ್ಲಿ ಇದ್ದೀರಾ? ಎಂದು ಮೋದಿಯವರಿಗೆ ಪ್ರಶ್ನೆ ಮಾಡಿದ್ರು. ಕೆಲ್ಲಿ ಮಾತಿಗೆ ಪ್ರಧಾನಿ ಮೋದಿ ನಕ್ಕು ಸುಮ್ಮನಾದ್ರು.
೩ ಪ್ರಧಾನಿ ಮೋದಿ ಮೋದಿ ಅವರಿಗೆ ಟ್ವಿಟರ್ ನಲ್ಲಿ ೩ ಕೋಟಿಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ. ಆದ್ರೆ ವರ್ಲ್ಡ್ ಫೇಮಸ್ ಆಗಿರೋ ಮೋದಿಗೆ ಪ್ರಶ್ನೆ ಕೇಳಿರುವ ಮೆಗ್ಯಾನ್ ಕೆಲ್ಲಿ ಕುರಿತು ನೆಟಿಜನ್ ಗಳು ಟ್ರೋಲ್ ಮಾಡಿದ್ದಾರೆ.
Comments