ಬಾಲಕಿಯರ ನೋವಿನ ಮಾತಿಗೆ ಕರಗಿದ ಸಿಎಂ ಸಿದ್ದ ರಾಮಯ್ಯ

ಬೆಂಗಳೂರು : ಸರ್ಕಾರಿ ಬಾಲಮಂದಿರದಲ್ಲಿ ಬಾಲಕಿಯ ರಿಗೆ ಸ್ಯಾನಿಟರಿ ನ್ಯಾಪ್ಕಿನ್ ಕೊಡುವುದಕ್ಕೂ ಅಲ್ಲಿನ ಮೇಲ್ವಿಚಾರಕರು ತೊಂದರೆ ನೀಡು ತ್ತಿರುವ ಬಗ್ಗೆ ಸ್ವತಃ ಮಕ್ಕಳೇ ಮುಖ್ಯಮಂತ್ರಿಗೆ ದೂರು ನೀಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ನಿಮ್ಹಾನ್ಸ್ ಬಳಿಯಿರುವ ಬಾಲಮಂದಿರದ ವಿದ್ಯಾರ್ಥಿನಿಯೊಬ್ಬಳು ಗುರುವಾರ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರೊಂದಿಗಿನ ಸಂವಾದದಲ್ಲಿ ಅಧಿಕಾರಿಗಳೆದುರೇ ಈ ದೂರು ನೀಡಿದಳು. ‘ನಮಗೆ ಹಾಸ್ಟೆಲ್ನಲ್ಲಿ ಸ್ಯಾನಿ ಟರಿ ನ್ಯಾಪ್ಕಿನ್ ಕೂಡ ಸರಿಯಾಗಿ ಕೊಡುತ್ತಿಲ್ಲ.
ಬಳಸಿದ ನ್ಯಾಪ್ಕಿನ್ ತೋರಿಸಿ ದರೆ ಮಾತ್ರ ಮತ್ತೊಂದು ನೀಡುತ್ತಾರೆ. ಸರಿಯಾಗಿ ಊಟವನ್ನೂ ಕೊಡುತ್ತಿಲ್ಲ. ವಾರಕ್ಕೊಮ್ಮೆಯೂ ಸ್ನಾನ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲ. ಇಲ್ಲಿರುವ 40 ಹೆಣ್ಣುಮಕ್ಕಳ ಪರಿಸ್ಥಿತಿ ತೀರಾ ಕಷ್ಟದಲ್ಲಿದೆ' ಎಂದು ಮುಖ್ಯಮಂತ್ರಿ ಮುಂದೆ ಗೋಳು ತೋಡಿಕೊಂಡಳು.
ಇದನ್ನು ಕೇಳಿ ಅವಾಕ್ಕಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೂಡಲೇ ಈ ಬಗ್ಗೆ ತಮಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದರಲ್ಲದೆ, ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಗದಗದ ಲಕ್ಷ್ಮೇ ಎಂಬಾಕೆ ತಮ್ಮ ಮನೆಯಲ್ಲಿ ಬಾಲ್ಯ ವಿವಾಹಕ್ಕೆ ಒತ್ತಾಯಿಸುವ ಪ್ರಸಂಗವನ್ನು ವಿವರಿಸಿ ಕಣ್ಣೀರಿಟ್ಟಳು. ಇದೆಲ್ಲದಕ್ಕೂ ಸಾವಧಾ ನದ ಉತ್ತರ ನೀಡಿದ ಸಿಎಂ, ತಕ್ಷಣದ ಕ್ರಮದ ಭರವಸೆ ನೀಡಿದರು. ಸಂಬಂಧಿಸಿದ ಅಧಿಕಾರಿ ಗಳ ನೆರವು ಪಡೆಯುವಂತೆ ಸಲಹೆ ನೀಡಿದರು.
ವಿಶೇಷ ಸವಾಲಿನ ಮಕ್ಕಳಿಗಾಗಿ ಎಸ್ಎಸ್ಎಲ್ಸಿ ನಂತರದ ಶಾಲೆಯನ್ನು ವಿಭಾಗ ಮಟ್ಟದಲ್ಲಿ ಆರಂಭಿಸಲಾಗುವುದು ಎಂದು ಅವರು ಧಾರವಾಡದ ತೇಜ ಎಂಬ ವಿಕಲಾಂಗ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದರು. ಕಿವುಡು ಮತ್ತು ಮೂಕ ಸಮಸ್ಯೆ ಎದರರಿಸುತ್ತಿರುವ ಮಕ್ಕಳಿಗೆ ಮೈಸೂರಿನಲ್ಲಿ ವಿಶೇಷ ಶಾಲೆ ಇದೆ. ಅದೇರೀತಿ ವಿಭಾಗ ಮಟ್ಟದಲ್ಲೂ ಒಂದೊಂದು ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಕುಸುಮಾ ಎಂಬಾಕೆ ತನ್ನ ಸಹೋ
Comments