ರಷ್ಯಾ ಕಂಪನಿಗಳಿಗೆ ಪ್ರಧಾನಿ ಮೋದಿ ಆಹ್ವಾನ
ಸೈಂಟ್ ಪೀಟರ್ಸ್ ಬರ್ಗ್ (ರಷ್ಯಾ): ಭಾರತದ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ರಕ್ಷಣಾ ಕ್ಷೇತ್ರಕ್ಕೆ ಹೈಟೆಕ್ ಸಾಧನಗಳನ್ನು ತಯಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ.
ಭಾರತವು ಪ್ರಪಂಚದ ೬ನೇ ಬಹುದೊಡ್ಡ ತಯಾರಿಕಾ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ನಾವು ಶೇ ೧೬ ರಿಂದ ಶೇ ೨೫ರಷ್ಟು ಜಿಡಿಪಿ ಯನ್ನು ಸಾಧಿಸಬೇಕಿದೆ. ಈ ಸಂಬಂಧ ಭಾರತ ಸರ್ಕಾರ ವಿದೇಶಿ ಕಂಪನಿಗಳೊಂದಿಗಿನ ಸಹಭಾಗಿತ್ವಕ್ಕಾಗಿ ಹೊಸ ನೀತಿಯನ್ನು ಜಾರಿಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಉಭಯ ದೇಶಗಳ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಎರಡು ರಾಷ್ಟ್ರದ ಸಿಇಓಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಖಾಸಗಿ ಕಂಪನಿಗಳು ವಿದೇಶಿ ಕಂಪನಿಗಳೊಂದಿಗೆ ಕೈಜೋಡಿಸಿ ರಕ್ಷಣಾ ಕ್ಷೇತ್ರಕ್ಕೆ ಸಾಧನಗಳನ್ನು ತಯಾರಿಸುವಂತೆ ಹೊಸ ನೀತಿಗೆ ತಿಂಗಳಿನಿಂದಲೇ ಅನುಮತಿ ನೀಡಲಾಗಿದೆ ಎಂದರು.
Comments