ದೆಹಲಿ ಸುತ್ತ ಮುತ್ತ ಭೂಕಂಪನದ ಅನುಭವ
ನವದೆಹಲಿ: ದೆಹಲಿ ಹಾಗೂ ಹರಿಯಾಣಾ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ ೫.೦ ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ನಸುಕಿನ ಜಾವ ೪.೨೫ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ.
ಭೂಕಂಪದ ಕೇಂದ್ರ ಭಾಗ ಹರ್ಯಾಣದ ರೋಹ್ಟಕ್ ಜಿಲ್ಲೆಯಲ್ಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪನದ ತೀವ್ರತೆ ೨೨ ಕಿಲೋ ಮಿ. ಸುತ್ತಮುತ್ತ ವ್ಯಾಪಿಸಿತ್ತು. ಆದ್ರೆ ಈ ವೇಳೆ ಯಾವುದೇ ಸಾವು-ನೋವು ಸಂಭವಿಸಿರುವುದರ ಬಗ್ಗೆ ವರದಿಯಾಗಿಲ್ಲ.
Comments