ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ- ನಾರಾಯಣ ಮೂರ್ತಿ

ನವದೆಹಲಿ: ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡರೆ ಯುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ಐಟಿ ವಲಯದಲ್ಲಿ ಈ ಹಿಂದೆ ಕೂಡಾ ಭಾರೀ ಹಿನ್ನಡೆಯಾಗಿತ್ತು. ೨೦೦೧, ೨೦೦೮ರಲ್ಲಿ ಬಿಕ್ಕಟ್ಟು ಎದುರಾಗಿತ್ತು. ಅದಕ್ಕೆ ನಾವು ಪರಿಹಾರವನ್ನು ಕಂಡುಕೊಂಡಿದ್ದೇವು. ಇವೆಲ್ಲಾ ಹೊಸದೇನಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಕಂಪನಿಯ ಹಿರಿಯ ಉದ್ಯೋಗಿಗಳು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡರೆ ಕಿರಿಯ ಉದ್ಯೋಗಿಗಳ ಕೆಲಸ ಮುಂದುವರೆಸಲಾಗುವುದು ಎಂದು ತಿಳಿಸಿದರು.
೨೦೦೧ರಲ್ಲಿ ಮಾರುಕಟ್ಟೆಯಲ್ಲಿ ನಮಗೆ ಹಿನ್ನಡೆಯಾದಾಗ ಆಡಳಿತ ಮಂಡಳಿ ಹಿರಿಯರೊಂದಿಗೆ ಕುಳಿತು ನಾವು ಚರ್ಚೆ ನಡೆಸಿದ್ದೇವು. ಯುವ ಉದ್ಯೋಗಿಗಳ ಕೆಲಸವನ್ನು ಉಳಿಸಲು ನಾವೆಲ್ಲರೂ ಸ್ವಲ್ಪ ಮಟ್ಟಿಗೆ ತ್ಯಾಗ ಮಾಡಲು ಸಿದ್ಧವಾಗಿದ್ದೇವು. ಅದೇ ರೀತಿ ಪ್ರತಿ ಬಾರಿ ಒಪ್ಪಿಕೊಂಡರೆ , ಉದ್ಯೋಗಿಗಳ ಕೆಲಸ ಕಡಿತ ಮಾಡಲಾಗುವುದಿಲ್ಲ ಎಂದರು.
Comments