OMG! ಪ್ರಾಣ ಬದಿಗಿಟ್ಟು ಹಗ್ಗದ ಮೇಲೆ ವಾಕಿಂಗ್

ದೆಹಲಿ : ಸ್ವಿಟ್ಜರ್ ಲ್ಯಾಂಡ್ ನ ಸ್ಯಾಮ್ಯುಯೆಲ್ ವೋಲೇರಿ ಎಂಬ ವ್ಯಕ್ತಿ ಸುಮಾರು ೮೦೦ ಅಡಿ ಅತಿ ಎತ್ತರದ ಕಣಿವೆಯಲ್ಲಿ ಹಗ್ಗದ ಮೇಲೆ ನಡೆಯುವ ಮೂಲಕ ವಿಶ್ವ ರಿಕಾರ್ಡ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ವಿಡ್ಜರ್ ಲ್ಯಾಂಡ್ ಮೂಲದ ಇವರು, ತುರ್ಕಿಯ ಬೆಟ್ಟವೊಂದರ ಪ್ರದೇಶದಲ್ಲಿ ಸ್ಯಾಮ್ಯುಯೆಲ್ ೮೦೦ ಅಡಿ ಎತ್ತರದಲ್ಲಿ ಹಗ್ಗ ಯಾನದ ಮೂಲಕ ೪೦೦ ಮೈಲಿ ವಾಕಿಂಗ್ ಪೂರ್ಣಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ಸ್ವತಃ ಅವರ ದಾಖಲೆಗೆ ಕಾರಣವಾಗಿದ್ದು, ಈ ಅದ್ಭುತ ಸಾಧನೆಗೆ ಅವರು ತೆಗೆದುಕೊಂಡ ಸಮಯ ೭೪ ನಿಮಿಷಗಳನ್ನು ತೆಗೆದುಕೊಂಡು ಮೇ ೧೪ರಂದು ವಿಶ್ವ ದಾಖಲೆ ಮಾಡಿದ್ದಾರೆ.
ಇದಕ್ಕಾಗಿ ಸ್ಯಾಮ್ಯುಯೆಲ್ ಪಟ್ಟ ಶ್ರಮ ಅಷ್ಟಿಷ್ಟಲ್ಲ, ಹಗ್ಗದ ಮೇಲೆ ಬ್ಯಾಲೆನ್ಸ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದ್ರೂ ಅವರು ಧೈರ್ಯ ಕಳೆದುಕೊಂಡಿರಲಿಲ್ಲ, ಬ್ಯಾಲೆನ್ಸ್ ಸಮಸ್ಯೆಯನ್ನು ತಪ್ಪಿಸಲು ನಿತ್ಯ ೧೦ ರಿಂದ ೧೫ ಗಂಟೆ ಸ್ಯಾಮ್ಯುಯೆಲ್ ವ್ಯಾಯಾಮ ಮಾಡುತ್ತಿದ್ದರಂತೆ.
Comments