ಬಾಬ್ರಿ ಮಸೀದಿ ಪ್ರಕರಣ.. ಕೋರ್ಟ್ ತೀರ್ಪಿನ ಮೇಲೆ ನಾಯಕರ ಚಿತ್ತ..!
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಸೇರಿದಂತೆ ಸಚಿವೆ ಉಮಾ ಭಾರತಿ, ಮುರಳಿ ಮನೋಹರ್ ಜೋಷಿ ಮತ್ತಿತರರು ಲಕ್ನೋದ ವಿಶೇಷ ಸಿಬಿಐ ಕೋರ್ಟ್ ಗೆ ಇವತ್ತು ಹಾಜರಾಗಲಿದ್ದಾರೆ.
ಬಾಬ್ರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ೨೦೧೦ರಲ್ಲಿ ರಾಯ ಬರೇಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಬಳಿಕ ಅಲಹಾಬಾದ್ ನ್ಯಾಯಾಲಯ ರಾಯಬರೇಲಿ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪಿನ್ನು ಸಿಬಿಐ ಸುಪ್ರಿಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಕಳೆದ ಏಪ್ರಿಲ್ ೧೯ರಂದು ಸುಪ್ರಿಂಕೋರ್ಟ್ ಅಡ್ವಾಣಿ, ಜೋಷಿ ಹಾಗೂ ಸಚಿವೆ ಉಮಾ ಭಾರತಿ ಸೇರಿದಂತೆ ಒಟ್ಟು ೧೬ ಮಂದಿ ವಿರುದ್ಧ ಮರು ವಿಚಾರಣೆ ನಡೆಸಲು ಸಮ್ಮಸಿತ್ತು.
ಆದ್ದರಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಿರುವ ವಿಶೇಷ ಸಿಬಿಐ ಕೋರ್ಟ್, ೨೫ರಂದು ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಸಚಿವೆ ಉಮಾ ಭಾರತಿ, ಮುರಳಿ ಮನೋಹರ್ ಜೋಷಿರವರಿಗೆ ಸೂಚನೆ ನೀಡಿತ್ತು.
Comments