ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿ : ಮೈಸೂರಿಗೆ 14 ನೇ ಸ್ಥಾನ
ಮೈಸೂರು ರೈಲ್ವೆ ನಿಲ್ದಾಣ ಎ ವಿಭಾಗದಲ್ಲಿ ಸ್ವಚ್ಛ ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದುಕೊಂಡಿದೆ.
ರೈಲ್ವೆ ಇಲಾಖೆ ಸ್ವಚ್ಛ ರೈಲ್ ಅಭಿಯಾನದ ಅಡಿ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಿದ್ದು, ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಭಾರತೀಯ ಗುಣಮಟ್ಟ ನಿಯಂತ್ರಣ ವಿಭಾಗ ಈ ಸಮೀಕ್ಷೆಯನ್ನು ದೇಶದ 407 ರೈಲ್ವೆ ನಿಲ್ದಾಣಗಳಲ್ಲಿ ಕೈಗೊಂಡಿತ್ತು.
ವಾರ್ಷಿಕ ಆದಾಯ 50 ಕೋಟಿ ಹೆಚ್ಚಿರುವ ರೈಲ್ವೆ ನಿಲ್ದಾಣಗಳನ್ನು ಎ1 ವಿಭಾಗಕ್ಕೆ ಸೇರಿಸಲಾಗಿದ್ದು, ವಾರ್ಷಿಕ ಆದಾಯ 8 ಕೋಟಿಯಿಂದ 50 ಕೋಟಿಗಳಷ್ಟಿರುವ ರೈಲ್ವೆ ನಿಲ್ದಾಣಗಳನ್ನು ಎ ವಿಭಾಗಕ್ಕೆ ಸೇರಿಸಲಾಗಿದೆ. ಕರ್ನಾಟಕದ ಮೈಸೂರು ಮತ್ತು ಬಂಗಾರಪೇಟೆ ರೈಲ್ವೆ ನಿಲ್ದಾಣಗಳು ಎ1 ವಿಭಾಗದಲ್ಲಿ ಅರ್ಹತೆ ಪಡೆದಿವೆ. ಇನ್ನು ಮೈಸೂರು ರೈಲ್ವೆ ನಿಲ್ದಾಣ ಕಳೆದ ಬಾರಿ ಸಮೀಕ್ಷೆಯಲ್ಲಿ ಸ್ಥಾನ ಪಡೆದಿರಲಿಲ್ಲ.
Comments