ಬಿಗ್ ಬಾಸ್ ಸ್ಪರ್ಧಿ ಮೇಲೆ ಗರಂ ಆದ ಕಿಚ್ಚ ಸುದೀಪ್..!! ಕಾರಣವೇನು ಗೊತ್ತಾ..?

ಸದ್ಯ ಕನ್ನಡದ ಬಿಗ್ ರಿಯಾಲಿಟಿ ಷೋ ಗಳಲ್ಲಿ ಬಿಗ್ ಬಾಸ್ ಕೂಡ ಒಂದು…ಸೀಜನ್ 7 ಪ್ರಾರಂಭವಾಗಿ ಎರಡು ವಾರಗಳೇ ಕಳೆದವೆ… ಪ್ರೇಕ್ಷಕರು ಈ ಬಾರಿ ಕಾಮನ್ ಇಲ್ಲವೆಂದರೂ ಕೂಡ ಸಲಬ್ರೆಟಿಗಳ ಷೋವನ್ನು ಎಂಜಾಯ್ ಮಾಡುತ್ತಿದ್ದಾರೆ.. ಈ ವಾರ ಬಿಗ್ ಬಾಸ್ ಮನೆಯಿಂದ 2 ನೇ ಸ್ಪರ್ಧಿ ಹೊರಬಂದಿದ್ದಾರೆ.. 2ನೇ ವಾರದ ಎಲಿಮಿನೇಷನ್ನಲ್ಲಿ ಚೈತ್ರಾ ವಾಸುದೇವನ್ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಬಿಗ್ ಬಾಸ್ ವೇದಿಕೆಗೆ ಬಂದ ಚೈತ್ರಾ ವಾಸುದೇವ್, ಆರೋಗ್ಯ ಸರಿಯಿಲ್ಲದಿರುವುದೇ ಹೊರ ಬರಲು ಕಾರಣ. ಮೊದಲಿನಿಂದಲೂ ಜ್ವರವಿತ್ತು. ನೆಗಡಿ ಜಾಸ್ತಿಯಾಗಿತ್ತು ಎಂದು ತಿಳಿಸಿದ್ದರು. ಆದರೆ ಸುದೀಪ್ ನೀವು ಹಾಗೆ ಕಾಣಲಿಲ್ಲವಲ್ಲ ಎಂದು ಸುದೀಪ್ ಚೈತ್ರ ವಾಸುದೇವನ್ ಅವರ ಕಾಲೆಳೆದಿದ್ದಾರೆ. ನಂತರ ಸುದೀಪ್ ಎದುರು ಚೈತ್ರಾ, ಬಿಗ್ ಬಾಸ್ ಜರ್ನಿಯ ಕ್ಷಣಗಳ ವಿಡಿಯೋ ನೋಡಿ, ನಾನು ಮೇಕಪ್ ಮಾಡಿಕೊಂಡಿರುವ ದೃಶ್ಯಗಳಿಲ್ಲ. ಫೈವ್ ಸ್ಟಾರ್ ಸ್ಟೇಟ್ ಮೆಂಟ್ ಇರಬಾರದಿತ್ತು. ಬೆಳಗಿನ ದೃಶ್ಯಗಳು ಮಾತ್ರ ಇವೆ ಎಂದು ಹೇಳಿದ್ದಾರೆ. ಈ ವೇಳೆ ಗರಂ ಆದ ಸುದೀಪ್, 7 ಸೀಸನ್ ಗಳಲ್ಲಿ ಯಾರು ಇಂತಹ ಮಾತುಗಳನ್ನು ಹೇಳಿಲ್ಲ. ನೀವು ನೆಗೆಟಿವ್ ಪಾಯಿಂಟ್ ಹುಡಕಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಈಗಷ್ಟೆ ಬಿಗ್ ಬಾಸ್ ಸೀಜನ್ ಪ್ರಾರಂಭವಾಗಿದ್ದು ಮನೆಯಲ್ಲಿ ಅಸಮಾಧಾನ ಗಲಾಟೆಗಳು ಭುಗಿಲೆಗಿದ್ದಿವೆ.. ಕೊನೆಯವರೆಗೂ ಬಿಗ್ ಬಾಸ್ ಮನೆಯಲ್ಲಿ ಯಾರು ಉಳಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments